` ಶಿವಣ್ಣ ಕಂಡಂಗ್ ಕಾಣ್ತೀಯಾ ಅಂದಾಗ ಅಳು ನಿಲ್ಲಿಸಿದ್ದ ಹೀರೋ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
bhandari brothers of rajaratha movie
Nirup, Anup Bhandari

ನೀನು ಬಿಡೋ... ಸಿನಿಮಾ ಹೀರೋ ಇದ್ದಂಗ್ ಇದೀಯಾ ಅಂದ್ರೆ, ಎಂತಹ ಹುಡುಗನೂ ಖುಷಿಯಾಗ್ತಾನೆ. ಆದರೆ ಇದು ಹೀರೋ ಕಥೆ ಕಣ್ರೀ. ಈ ಹೀರೋ ಬೇರ್ಯಾರೂ ಅಲ್ಲ. ನಿರೂಪ್ ಭಂಡಾರಿ. ರಂಗಿತರಂಗ ಹಾಗೂ ರಾಜರಥ ಚಿತ್ರಗಳ ಹೀರೋ ನಿರೂಪ್ ಭಂಡಾರಿ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಸೋದರರು. ಅಣ್ಣ-ತಮ್ಮಂದಿರು. ಇಬ್ಬರೂ ಚಿಕ್ಕವರಿದ್ದಾಗ ನಿರೂಪ್‍ಗೆ ಗಾಯವಾಗಿತ್ತಂತೆ.

ನಿರೂಪ್ ಏನೋ ಮಾಡಲು ಹೋಗಿ, ಇನ್ನೇನೋ ಆಗಿತ್ತು. ಹಣೆಯಲ್ಲಿ ರಕ್ತ ಸುರಿಯುತ್ತಿತ್ತು. ಇನ್ನು ಮನೆಯವರಿಗೆ ಗೊತ್ತಾದರೆ ಬೈತಾರೆ ಅನ್ನಿಸಿದಾಗ, ಅನೂಪ್, ತಮ್ಮ ತಮ್ಮನಿಗೆ `ನೀನು ರಥಸಪ್ತಮಿ ಫಿಲ್ಮ್‍ನಲ್ಲಿ ಶಿಲೆಗಳು ಸಂಗೀತವಾ ಹಾಡಿವೆ ಹಾಡಿನಲ್ಲಿರೋ ಶಿವಣ್ಣನ ಥರಾ ಕಾಣ್ತಿದ್ದೀಯಾ' ಎಂದಿದ್ದರಂತೆ ನಿರೂಪ್.

ವ್ಹಾವ್.. ನಾನು ಶಿವಣ್ಣ ಕಂಡಂಗ್ ಕಾಣ್ತಿದ್ದೀನಾ ಅನ್ನಿಸಿದ್ದೇ ತಡ, ನಿರೂಪ್ ಭಂಡಾರಿ ಹಣೆಯಲ್ಲಿ ಆಗಿದ್ದ ಗಾಯ ಮತ್ತು ಸುರಿಯುತ್ತಿದ್ದ ರಕ್ತವನ್ನು ಮರೆತು ಅಳು ನಿಲ್ಲಿಸಿದ್ದರಂತೆ.

ಈ ಅಣ್ಣತಮ್ಮಂದಿರು ಎರಡನೇ ಬಾರಿ ಜೊತೆಯಾಗಿರುವ ರಾಜರಥ ಈ ವಾರ ತೆರೆಗೆ ಬರುತ್ತಿದೆ. ರಂಗಿತರಂಗದಲ್ಲಿ ಮೋಡಿ ಮಾಡಿದ್ದ ಸೋದರರು, ರಾಜರಥದಲ್ಲಿ ಅಬ್ಬರಿಸಲಿ ಎನ್ನುವುದು ಎಲ್ಲರ ಹಾರೈಕೆ.