ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಹೊಸ ಚಿತ್ರ ಬಕಾಸುರ. ರವಿಚಂದ್ರನ್ ಜೊತೆಗೆ ಹೀರೋ ಆಗಿರುವ ಇನ್ನೊಬ್ಬ ನಟ ಆರ್‍ಜೆ ರೋಹಿತ್. ಇಬ್ಬರದ್ದೂ ನೆಗೆಟಿವ್ ಶೇಡ್ ಇರುವ ಪಾತ್ರ. ಹಾಗಾದರೆ, ಹೀರೋ ಯಾರು..? ನಿಮಗೆ ಅಚ್ಚರಿಯಾಗಬಹುದು. ಚಿತ್ರದ ಹೀರೋ ದುಡ್ಡು.
ಈ ಸಿನಿಮಾದಲ್ಲಿ ಹಣವೇ ಅತ್ಯಂತ ದೊಡ್ಡ ಪಾತ್ರ. ಒಬ್ಬ ಒಳ್ಳೆಯ ವ್ಯಕ್ತಿ ಹಣದ ಹಿಂದೆ ಬಿದ್ದರೆ ಏನೆಲ್ಲ ಅನಾಹುತಗಳಾಗುತ್ತವೆ ಅನ್ನುವುದೇ ಚಿತ್ರದ ಕಥಾವಸ್ತು. ಅದನ್ನು ಕಾಮಿಡಿ ಮತ್ತು ಹಾರರ್ ಮೂಲಕ ಹೇಳಿದ್ದಾರೆ ನಿರ್ದೇಶಕ ನವನೀತ್.
ಎಷ್ಟೋ ವರ್ಷಗಳ ನಂತರ ರವಿಚಂದ್ರನ್, ನೆಗೆಟಿವ್ ರೋಲ್‍ನಲ್ಲಿ ನಟಿಸಿದ್ದಾರೆ ಎನ್ನುವುದೇ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಗಾಂಧಾರಿ ಸೀರಿಯಲ್ ಖ್ಯಾತಿಯ ಕಾವ್ಯಾಗೌಡ ಚಿತ್ರದ ನಾಯಕಿ.