ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರಕ್ಕೆ ಓಂಕಾರ ಬಿದ್ದಿದೆ. ಚಿತ್ರಕ್ಕೆ ಹನುಮಂತನಗರದ ಶ್ರೀರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು. ಕಿಚ್ಚ ಸುದೀಪ್ ಅಭಿನಯದ ಮೊದಲ ದೃಶ್ಯಕ್ಕೆ ಪ್ರಿಯಾ ಸುದೀಪ್ ಕ್ಲಾಪ್ ಮಾಡಿದರು.
ಚಿತ್ರವನ್ನು ನಿರ್ದೇಶಿಸುತ್ತಿರುವುದು ಹೆಬ್ಬುಲಿ ಕೃಷ್ಣ. ಸ್ವಪ್ನ ಕೃಷ್ಣ ನಿರ್ಮಾಪಕಿ. ಇನ್ನುಳಿದಂತೆ ಹೆಬ್ಬುಲಿ ಚಿತ್ರತಂಡವೇ ಈ ಚಿತ್ರದಲ್ಲೂ ಕೆಲಸ ಮಾಡಲಿದೆ.
ಹೆಬ್ಬುಲಿಯಲ್ಲಿ ಸುದೀಪ್‍ರನ್ನು ಸೈನಿಕನಾಗಿ ತೋರಿಸಿದ್ದ ಕೃಷ್ಣ, ಈ ಚಿತ್ರದಲ್ಲಿ ಸುದೀಪ್ ಅವರನ್ನು ಬಾಕ್ಸರ್ ಆಗಿ ತೋರಿಸಲಿದ್ದಾರೆ.