ಲೌಡ್ ಸ್ಪೀಕರ್. ಆ ಹೆಸರು ಕೇಳಿದರೆ, ಒಂದು ಜನರೇಷನ್ನಿನವರು ಭೂತಕಾಲಕ್ಕೆ ಹೋಗಿ ಬರುತ್ತಾರೆ. ಒಂದು ಕಾಲದಲ್ಲಿ ಮದುವೆ ಮನೆಗಳಲ್ಲಿ, ಬಸ್ಸುಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ ಲೌಡ್‍ಸ್ಪೀಕರ್ ಹಾಕೋದು ಟ್ರೆಂಡ್ ಆಗಿತ್ತು. ಆದರೆ, ನಾವು ಹೇಳ್ತಿರೋದು ಲೌಡ್‍ಸ್ಪೀಕರ್ ಅನ್ನೋ ಸಿನಿಮಾ ಕಥೆ.
ಈ ಚಿತ್ರದ ಪೋಸ್ಟರ್ ನೋಡಿದರೆ ಕುತೂಹಲ ಹುಟ್ಟುವುದು ಖಂಡಿತಾ. ಏಕೆಂದರೆ, ಚಿತ್ರದ ಪೋಸ್ಟರ್‍ನಲ್ಲಿ ಇದು worlds most dangerous game ಅನ್ನೋ ಲೈನ್ ಇದೆ. ಆದರೆ, ಡಾರ್ಕ್ ಕಾಮಿಡಿ ಥ್ರಿಲ್ಲರ್ ಅಂತಾರೆ ನಿರ್ದೇಶಕರು. ಹೇಗೆ ಅನ್ನೋ ಕುತೂಹಲದ ಪ್ರಶ್ನೆ ಕೇಳಿದ್ರೆ, ವೇಯ್ಟ್.. ಕೆಲವೇ ದಿನಗಳಲ್ಲಿ ರಿಲೀಸ್ ಆಗುತ್ತೆ ಅನ್ನೋ ಉತ್ತರ ಸಿಗುತ್ತೆ ನಿರ್ದೇಶಕ ಶಿವತೇಜಸ್ ಅವರಿಂದ.
ಮಳೆ, ಧೈರ್ಯಂ ಚಿತ್ರದ ನಂತರ ನಿರ್ದೇಶಕ ಶಿವತೇಜಸ್, ಕಾಮಿಡಿ, ಥ್ರಿಲ್ಲರ್ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ರಾಜ್ ಪ್ರೊಡಕ್ಷನ್ಸ್‍ನಿಂದ ಬರುತ್ತಿರುವ 2ನೇ ಸಿನಿಮಾ ಲೌಡ್‍ಸ್ಪೀಕರ್. ಡಾ.ರಾಜು ಚಿತ್ರದ ನಿರ್ಮಾಪಕರು.