ಹೊಸ ಸಿನಿಮಾವೊಂದು ರಿಲೀಸ್ ಆಗುವಾಗ ಚಿತ್ರದ ಹೀರೋ ಕಟೌಟ್ ನಿಲ್ಲಿಸೋದು ಸಾಮಾನ್ಯ. ಕೆಲವೊಮ್ಮೆ ನಿರ್ದೇಶಕರ ಕಟೌಟ್‍ನ್ನೂ ಹಾಕ್ತಾರೆ. ನಾಯಕರ ಕಟೌಟ್‍ನ್ನು ವಿಭಿನ್ನವಾಗಿ, ವಿಶಿಷ್ಟವಾಗಿ ಮಾಡಿಸಿ, ಎತ್ತರದ ಕಟೌಟ್ ಮಾಡಿಸಿ ಪ್ರಮುಖ ಥಿಯೇಟರ್‍ಗಳ ಎದುರು ನಿಲ್ಲಿಸೊದು ಹೊಸದನೇನಲ್ಲ. ಆದರೆ, ಇಲ್ಲಿಯೂ ರಾಜರಥ ಚಿತ್ರತಂಡ ವಿಭಿನ್ನತೆ ಮೆರೆದಿದೆ.
ರಾಜರಥ ಚಿತ್ರದ ಹೀರೋ ನಿರೂಪ್ ಭಂಡಾರಿ ಕಟೌಟ್‍ನ್ನು ಥಿಯೇಟರ್‍ಗಳ ಮುಂದೆ ಹಾಕಲಾಗಿದೆ. ಆದರೆ, ಹೀರೋ ಇರೋದು ಸೂಪರ್‍ಮ್ಯಾನ್ ಶೈಲಿಯಲ್ಲಿ. ಆದರೆ, ಚಡ್ಡಿಯಲ್ಲಿ. ಬಹುಶಃ, ಚಡ್ಡಿಯಲ್ಲಿ ನಿಂತ ನಾಯಕನ ಕಟೌಟ್ ಹಾಕಿರೋದು ಇದೇ ಮೊದಲಿರಬೇಕು.
ಕಟೌಟ್‍ನಲ್ಲಿ ಪುನೀತ್ ಅವರೂ ಇದ್ದಾರೆ. ಅಂದಹಾಗೆ ಚಿತ್ರದಲ್ಲಿ ರಾಜರಥ ಎಂದರೆ, ಪುನೀತ್ ಅವರೇ. ಈಗಾಗಲೇ ಟಿಕೆಟ್ ಬುಕಿಂಗ್ ಶುರುವಾಗಿದ್ದು, ರಾಜರಥದ ಜೋರು ಕಾಣುತ್ತಿದೆ.