ರಾಜರಥ ಚಿತ್ರದ ಹೀರೋ ನಿರೂಪ್ ಭಂಡಾರಿ. ಅವರಿಗೆ ಇದು ಎರಡನೇ ಸಿನಿಮಾ. ಚಿತ್ರದ ಕಥೆ ಏನು ಎಂದರೆ, ಗುಟ್ಟು ಬಿಟ್ಟುಕೊಡದ ನಿರೂಪ್, ಹೀರೋ ವಿಶೇಷತೆಯೇನು ಎಂದಾಗ ಒಂದಿಷ್ಟು ಸ್ವಾರಸ್ಯಗಳನ್ನು ಬಿಟ್ಟುಕೊಟ್ಟಿದ್ದಾರೆ.
ಚಿತ್ರದ ಹೀರೋ ಹೆಸರು ಅಭಿ. ಮೆಕ್ಯಾನಿಕಲ್ ಎಂಜಿನಿಯರ್ ಸ್ಟೂಡೆಂಟ್. ಕಾಲೇಜಿನಲ್ಲಿದ್ದಾಗ ಆವಂತಿಕಾ ಶೆಟ್ಟಿ ಜೊತೆ ಪ್ರೀತಿಗೆ ಬೀಳುವ ಪಾತ್ರ ಅದು. ಇನ್ನು ಆ ಪಾತ್ರ ಸ್ವಲ್ಪ ವಿಭಿನ್ನವಾಗಿದೆ. ಅಭಿಗೆ ಕವಿತೆ ಬರೆಯುವ ಹುಡುಗ. ಅಷ್ಟೇ ಅಲ್ಲ, ಗೆಳೆಯರ ಜೊತೆ ಮಾತನಾಡುವಾಗ ಹಳೆಯ ಸಿನಿಮಾಗಳ ಡೈಲಾಗ್‍ಗಳನ್ನು ಬಳಸಿಕೊಂಡೇ ಮಾತನಾಡುವ ಪಾತ್ರ. ಇದು ಸ್ವತಃ ನಿರೂಪ್ ಭಂಡಾರಿ ರಿಯಲ್ ಲೈಫ್‍ಗೆ ಹೋಲಿಕೆಯಾಗುತ್ತಿದೆ.
ಸಿನಿಮಾ ನೋಡಿ. ಇಡೀ ಸಿನಿಮಾದ ಪ್ರತಿ ದೃಶ್ಯವೂ ಪೇಂಯ್ಟಿಂಗ್ ರೀತಿ ಬಂದಿದೆ. ಚಿತ್ರದ ಹಾಡು, ದೃಶ್ಯ ಶ್ರೀಮಂತಿಕೆಯಿಂದ ಕೂಡಿವೆ. ಡೋಂಟ್ ಮಿಸ್ ಎಂಬ ಪ್ರೀತಿಯ ಕರೆಯೋಲೆ ಕೊಟ್ಟಿದೆ ರಾಜರಥ ತಂಡ.