ಬಟರ್‍ಫ್ಲೈ ಚಿತ್ರದಲ್ಲಿ ಕಂಪ್ಲೀಟ್ ಬ್ಯುಸಿಯಾಗಿರುವ ರಮೇಶ್ ಅರವಿಂದ್, ಇದರ ಮಧ್ಯೆಯೇ ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಡೈರೆಕ್ಟರ್ ಆಗಿ ಅಲ್ಲ, ಹೀರೋ ಆಗಿ. ಬಟರ್ ಫ್ಲೈ ಚಿತ್ರವನ್ನು ಕನ್ನಡ, ತಮಿಳು, ತೆಲುಗಿನಲ್ಲಿ ನಿರ್ದೇಶನ ಮಾಡುತ್ತಿರುವ ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ ನಿರ್ಮಾಣದ ಚಿತ್ರದಲ್ಲೂ ತೊಡಗಿಸಿಕೊಂಡಿರುವುದು ಗೊತ್ತಿರುವ ವಿಷಯವೇ. ಈ ಎರಡೂ ಸಿನಿಮಾಗಳ ನಂತರ ಹೊಸ ಚಿತ್ರ ಸೆಟ್ಟೇರಲಿದೆ.
ರಮೇಶ್ ಅರವಿಂದ್ ಅಭಿನಯದ ಹೊಸ ಸಿನಿಮಾಗೆ ಇಮ್ರಾನ್ ಸರ್ದಾರಿಯಾ ನಿರ್ದೇಶಕ. ಈ ಮೊದಲು ಎರಡು ರೊಮ್ಯಾಂಟಿಕ್ ಸಿನಿಮಾ ಮಾಡಿರುವ ಇಮ್ರಾನ್, ಈ ಬಾರಿ ಥ್ರಿಲ್ಲರ್ ಕಥೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಚಿತ್ರದ ಚಿತ್ರಕಥೆ ಸಿದ್ಧವಾಗುತ್ತಿದ್ದು, ಪ್ರತಿಯೊಬ್ಬರಿಗೂ ಇಷ್ಟವಾಗಲಿದೆ ಎಂಬ ಭರವಸೆ ಇಮ್ರಾನ್ ಸರ್ದಾರಿಯಾ ಅವರದ್ದು.