ಪುನೀತ್ ರಾಜ್‍ಕುಮಾರ್ ಅಭಿನಯದ ಹೊಸ ಚಿತ್ರದ ಟೈಟಲ್ ಏನು..? ಪಂಜುನಾ..? ಅಧಿಪತಿನಾ..? ಎಂದು ತಲೆಗೆ ಹುಳ ಬಿಟ್ಟುಕೊಂಡಿದ್ದವರಿಗೆ ಉತ್ತರ ಸಿಕ್ಕಿದೆ. ಪುನೀತ್ ಹೊಸ ಚಿತ್ರದ ಟೈಟಲ್ ನಟಸಾರ್ವಭೌಮ.
ನಟಸಾರ್ವಭೌಮ ಎನ್ನುವುದು ಡಾ.ರಾಜ್‍ಕುಮಾರ್ ಅವರ ಬಿರುದುಗಳಲ್ಲಿ ಒಂದು ಹಾಗೂ ಅದು ಡಾ.ರಾಜ್ ಅವರ ಸಾಕ್ಷ್ಯಚಿತ್ರದ ಹೆಸರು ಕೂಡಾ ಹೌದು.
ಈ ಆ ಟೈಟಲ್‍ನ್ನು ಪುನೀತ್ ಅವರ ಹೊಸ ಚಿತ್ರಕ್ಕೆ ಫೈನಲ್ ಮಾಡಲಾಗಿದೆ. ಚಿತ್ರದ ಫಸ್ಟ್ ಲುಕ್ ಇಂದು ರಾತ್ರಿ (ಮಾರ್ಚ್ 16ರ ಮಧ್ಯರಾತ್ರಿ) ಪ್ರೇಕ್ಷಕರ ಎದುರು ಬರಲಿದೆ. ಕ್ಯಾಮೆರಾ ಹಿಡಿದುಕೊಂಡಿರುವ ಪುನೀತ್ ಅವರ ಫೋಟೋದಲ್ಲಿ ಚಿತ್ರದ ಕಥೆಯ ಗುಟ್ಟು ಮಾತ್ರ ಬಹಿರಂಗವಾಗುತ್ತಿಲ್ಲ.
Related Articles :-