` ಸಾಧು ಕೋಕಿಲಾ.. ಜಾನಿ ಲೀವರ್ ಒಟ್ಟಿಗೇ ಬಂದರು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
johnny lever and sadhu kokila image
Sadhu and Johnny To Act in Gara Ad Brothers

ಸಾಧು ಕೋಕಿಲಾ, ಕನ್ನಡದ ಹಾಸ್ಯನಟ. ಜಾನಿ ಲೀವರ್ ಬಾಲಿವುಡ್‍ನ ಹಾಸ್ಯನಟ. ಕೆಲವು ಹಂತದಲ್ಲಿ ಸಾಧು ಅವರನ್ನು ಕನ್ನಡದ ಜಾನಿ ಲೀವರ್ ಎಂದು ಕರೆಯುವವರಿಗೂ ಕೊರತೆಯಿಲ್ಲ. ಈಗ ಅವರಿಬ್ಬರೂ ಒಂದಾಗಿದ್ದಾರೆ. ಒಂದೇ ಚಿತ್ರದಲ್ಲಿ ಒಟ್ಟಿಗೇ ಅಣ್ಣತಮ್ಮಂದಿರಾಗಿ ನಟಿಸುತ್ತಿದ್ದಾರೆ.

ಕೆ.ಆರ್. ಮುರಳೀಕೃಷ್ಣ ನಿರ್ದೇಶನದ `ಗರ' ಚಿತ್ರದಲ್ಲಿ ಸಾಧು ಹಾಗೂ ಜಾನಿ ಒಟ್ಟಿಗೇ ನಟಿಸುತ್ತಿದ್ದಾರೆ. ಅಣ್ಣತಮ್ಮಂದಿರ ಪಾತ್ರದಲ್ಲಿ ನಟಿಸುತ್ತಿರುವ ಇಬ್ಬರಿಗೂ ಒಂದೇ ರೀತಿಯ ಕಾಸ್ಟ್ಯೂಮ್ ಡಿಸೈನ್ ಮಾಡಲಾಗಿದೆ.

ನಿರ್ದೇಶಕ ಮುರಳೀಕೃಷ್ಣ, ನಿರ್ದೇಶಕ ಶಾಂತಾರಾಮ್ ಅವರ ಪುತ್ರ. ಚಿತ್ರದಲ್ಲಿ ಆವಂತಿಕಾ ಮೋಹನ್, ಆರ್ಯನ್, ನ್ಯೂಸ್ ಆ್ಯಂಕರ್ ಆಗಿದ್ದ ರೆಹಮಾನ್ ಮೊದಲಾದವರು ನಟಿಸುತ್ತಿದ್ದಾರೆ.