ವಿದೇಶಿ ಹುಡುಗಿ ಜೊತೆ ಹುಚ್ಚ ವೆಂಕಟ್‍ಗೆ ಲವ್ವಾಗಿಬಿಟ್ಟಿದೆ. ಮದುವೆಯೂ ಆಗಿಬಿಟ್ಟಿದ್ದಾರೆ. ನನ್‍ಮಗಂದ್... ಯಾವಾಗಾಯ್ತು..? ಅನ್ನೋಕೆ ಹೋಗಬೇಡಿ. ಆಗಿರೋದೆಲ್ಲ ಸಿನಿಮಾದಲ್ಲಿ. ಓ ಪ್ರೇಮವೇ ಚಿತ್ರದ ಕಥೆಯಲ್ಲಿ.
ಇಂದು ರಿಲೀಸ್ ಆಗಿರುವ ಓ ಪ್ರೇಮವೇ ಚಿತ್ರದಲ್ಲಿರೋದು ಅಪ್ಪಟ ಪ್ರೇಮಕಥೆ. ತ್ರಿಕೋನ ಪ್ರೇಮಕಥೆಗೆ ಸ್ಫೂರ್ತಿ ಒಂದು ಸತ್ಯಘಟನೆ.
ಮೊಗ್ಗಿನ ಮನಸು ನಂತರ, ಒಳ್ಳೊಳ್ಳೆಯ ಡೈರೆಕ್ಟರ್‍ಗಳ ಜೊತೆ ಕೆಲಸ ಮಾಡುವ ಆಸೆಯಿತ್ತು. ಆದರೆ, ಅದು ಈಡೇರಲಿಲ್ಲ. ಹೀಗಾಗಿ ನಾನೇ ನಿರ್ದೇಶನಕ್ಕೆ ಇಳಿದೆ. ಕಥೆಯನ್ನು ಕನ್ನಡಿಗರು ಖಂಡಿತಾ ಮೆಚ್ಚಿಕೊಳ್ತಾರೆ ಅನ್ನೋದು ನಾಯಕ, ನಿರ್ದೇಶಕ ಮನೋಜ್ ಅವರ ಭರವಸೆಯ ಮಾತು.
ಚಿತ್ರದಲ್ಲಿ ನಿಕ್ಕಿ ಗರ್ಲಾನಿ ನಾಯಕಿ. ಚಿತ್ರದಲ್ಲಿ 5 ಹಾಡುಗಳಿದ್ದು, ಕಿವಿಗಿಂಪಾಗಿವೆ. ಆ್ಯಕ್ಷನ್, ಕಾಮಿಡಿ, ರೊಮ್ಯಾನ್ಸ್ ಎಲ್ಲವೂ ಇರುವ ಸಿನಿಮಾ ಎನ್ನುವುದು ಚಿತ್ರತಂಡದ ಭರವಸೆ.