ಧನ್ಯಾ. ಈಕೆ ರಾಮ್‍ಕುಮಾರ್ ಹಾಗೂ ಪೂರ್ಣಿಮಾ ದಂಪತಿಯ ಮಗಳು. ಅಂದರೆ, ಡಾ.ರಾಜ್‍ಕುಮಾರ್ ಅವರ ಮೊಮ್ಮಗಳು. ಪೂರ್ಣಿಮಾ ಡಾ.ರಾಜ್ ಅವರ ಪುತ್ರಿ. ಇತ್ತೀಚೆಗೆ ಧನ್ಯಾರ ಒಂದಷ್ಟು ಫೋಟೋಗಳು ಆನ್‍ಲೈನ್‍ನಲ್ಲಿ ಭರ್ಜರಿ ಸದ್ದು ಮಾಡಿದ್ದವು. ಆ ಫೋಟೋ ನೋಡಿದವರು, ಇದು ಚಿತ್ರರಂಗಕ್ಕೆ ಬರುವ ಮುನ್ಸೂಚನೆ ಎಂದುಕೊಂಡಿದ್ದರು. ಆದರೆ, ಅದಕ್ಕೆ ತದ್ವಿರುದ್ಧ ಉತ್ತರ ನೀಡಿರೋದು ಧನ್ಯಾ ರಾಮ್‍ಕುಮಾರ್.
ನಾನು ಸದ್ಯಕ್ಕೆ ಪಿಆರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಚಿತ್ರರಂಗಕ್ಕೆ ಬರಲು ಇಷ್ಟವಿಲ್ಲ. ಹಾಗೆ ನೋಡಿದರೆ, ಸಂಗೀತ ನನ್ನ ಆಸಕ್ತಿಯ ಕ್ಷೇತ್ರ. ಗಾಯಕಿಯಾಗಿ ಬಂದರೂ ಬರಬಹುದೇನೋ.. ನಾಯಕಿಯಾಗಿಯಂತೂ ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಧನ್ಯಾ.
ಆದರೆ, ತಮ್ಮ ಅಣ್ಣ ಧಿರೇನ್ ನಟಿಸುವ ಮೊದಲ ಚಿತ್ರಕ್ಕೆ ಸ್ಟೈಲಿಂಗ್ ಮಾಡುವುದು ನಾನೇ. ನನ್ನ ಅಣ್ಣ ಎಲ್ಲರಿಗಿಂತ ಚೆನ್ನಾಗಿ ಕಾಣಬೇಕು. ಹಾಗೆ ಮಾಡುತ್ತೇನೆ ಎಂದು ಹೇಳಿಕೊಳ್ತಾರೆ ಧನ್ಯಾ.
ಒಟ್ಟಿನಲ್ಲಿ ಚಿತ್ರರಂಗಕ್ಕೆ ಧನ್ಯಾ ಬರಬಹುದು. ಆದರೆ, ನಾಯಕಿಯಾಗಿ ಬರೋದಿಲ್ಲ. ಬಂದರೆ, ಗಾಯಕಿಯಾಗಿ ಬರಬಹುದೇನೋ.