ಪುನೀತ್ ರಾಜ್ಕುಮಾರ್ ಅಭಿನಯದ ಹೊಸ ಚಿತ್ರಕ್ಕೆ ನಾಯಕಿ ಬದಲಾಗಿದ್ದಾರೆ. ಮೊದಲ ದಿನದ ಶೂಟಿಂಗ್ನಲ್ಲೂ ಭಾಗವಹಿಸಿದ್ದ ಪ್ರಿಯಾಂಕಾ ಜವಾಲ್ಕರ್ ಜಾಗಕ್ಕೆ ರಚಿತಾ ರಾಮ್ ಬಂದಿದ್ದಾರೆ. ರಚಿತಾ ರಾಮ್ಗೆ ಇದು ಪುನೀತ್ ಜೊತೆಗೆ 2ನೇ ಸಿನಿಮಾ. ಈ ಮೊದಲು ಚಕ್ರವ್ಯೂಹ ಚಿತ್ರಕ್ಕೆ ಹೀರೋಯಿನ್ ಆಗಿದ್ದ ರಚಿತಾ, ಮತ್ತೊಮ್ಮೆ ಪುನೀತ್ಗೆ ಜೋಡಿಯಾಗಿದ್ದಾರೆ.
ಪುನೀತ್ ಜೊತೆ ನಟಿಸುತ್ತಿರುವುದು ನನ್ನ ಅದೃಷ್ಟ ಎಂದು ಹೇಳಿಕೊಂಡಿದ್ದ ಪ್ರಿಯಾಂಕಾ, ದಿಢೀರನೆ ಪ್ರಾಜೆಕ್ಟ್ನಿಂದ ಹೊರಹೋಗಿದ್ದಕ್ಕೆ ಡೇಟ್ಸ್ ಪ್ರಾಬ್ಲಂ ಕಾರಣವಂತೆ. ಹೀಗಂತ ಹೇಳಿರೋದು ನಿರ್ದೇಶಕ ಪವನ್ ಒಡೆಯರ್.
ಒಟ್ಟಿನಲ್ಲಿ ಮತ್ತೊಮ್ಮೆ ಸ್ಟಾರ್ ಚಿತ್ರಕ್ಕೇ ರಚಿತಾ ಹೀರೋಯಿನ್ ಆಗಿದ್ದಾರೆ. ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಈ ಬಹುನಿರೀಕ್ಷಿತ ಚಿತ್ರದ ಫಸ್ಟ್ಲುಕ್ ಮಾರ್ಚ್ 17ರಂದು ಬಿಡುಗಡೆಯಾಗಲಿದೆ. ಆ ದಿನ ಪುನೀತ್ ಅವರ ಹುಟ್ಟುಹಬ್ಬ.