ಓ ಪ್ರೇಮವೇ.. ಇದು ಮನೋಜ್ ಕುಮಾರ್ ಎಂಬ ಹೊಸಪ್ರತಿಭೆ ನಾಯಕರಾಗಿರುವ ಚಿತ್ರ. ಚಿತ್ರಕ್ಕೆ ನಿಕ್ಕಿ ಗರ್ಲಾನಿ ಹೀರೋಯಿನ್. ಮನೋಜ್ ಅವರದ್ದೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಇರುವ ಸಿನಿಮಾಗೆ ಚಂಚಲ ಕುಮಾರಿ ನಿರ್ಮಾಪಕಿ. ಇದೇ ಶುಕ್ರವಾರ ತೆರೆಗೆ ಬರುತ್ತಿರುವ ಓ ಪ್ರೇಮವೇ ಚಿತ್ರ ಬೇಡ ಬೇಡವೆಂದರೂ ರವಿಚಂದ್ರನ್ ಅವರನ್ನು ನೆನಪಿಸುತ್ತೆ.
ಓ ಪ್ರೇಮವೇ ಅನ್ನೋ ಹೆಸರಿನ ಸಿನಿಮಾ ಈ ಹಿಂದೆ ಬಂದಿತ್ತು. 18 ವರ್ಷಗಳ ಹಿಂದೆ. ರವಿಚಂದ್ರನ್-ರಂಭಾ ನಾಯಕ, ನಾಯಕಿಯಾದರೆ, ಪ್ರಮುಖ ಪಾತ್ರದಲ್ಲಿ ಶ್ರೀನಿವಾಸ ಮೂರ್ತಿ, ದಿ.ಶ್ರೀಹರಿ ನಟಿಸಿದ್ದರು. ಈಗ ಅದೇ ಹೆಸರಿನ ಸಿನಿಮಾ ಮತ್ತೊಮ್ಮೆ ಬರುತ್ತಿರುವಾಗ ರವಿಚಂದ್ರನ್ ನೆನಪಾದರೆ, ಆಶ್ಚರ್ಯವೇನೂ ಇಲ್ಲ.
ಆದರೆ, ಹೆಸರಿನ ಹೊರತಾಗಿ ಬೇರೇನೂ ಸಂಬಂಧವಿಲ್ಲ. ಚಿತ್ರದಲ್ಲಿ ಹಣ, ಶ್ರೀಮಂತ್ರಿಕೆಗಿಂತ ಪ್ರೀತಿಯೇ ಮುಖ್ಯ ಎಂಬ ಸಂದೇಶವಿದೆ. ಚಿತ್ರದಲ್ಲಿ ಅದನ್ನು ಚೆನ್ನಾಗಿ ತೋರಿಸಲಾಗಿದೆ. ಜನ ಖಂಡಿತಾ ಇಷ್ಟಪಡುತ್ತಾರೆ ಎನ್ನುವುದು ಚಿತ್ರತಂಡದ ನಂಬಿಕೆ.