ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, ಅದ್ಭುತ ಡ್ಯಾನ್ಸರ್ ಎಂಬುದು ಕನ್ನಡಿಗರೆಲ್ಲರಿಗೂ ಗೊತ್ತಿರುವ ವಿಚಾರವೇ. ದಿ ವಿಲನ್ ಚಿತ್ರದಲ್ಲಿ ಶಿವಣ್ಣ ಜೊತೆ ಹಲವು ಸುಂದರಿಯರು ಹೆಜ್ಜೆ ಹಾಕಿದ್ದಾರೆ. ರಚಿತಾ ರಾಮ್, ಶ್ರದ್ಧಾ ಶ್ರೀನಾಥ್, ರಾಧಿಕಾ ಚೇತನ್, ಭಾವನಾ ರಾವ್, ಸಂಯುಕ್ತಾ ಹೊರನಾಡು, ಶಾನ್ವಿ ಶ್ರೀವಾಸ್ತವ್.. ಶಿವಣ್ಣ ಜೊತೆ ಸ್ಟೆಪ್ ಹಾಕಿರುವ ನಟಿಯರು. ಇವರಿಗೆಲ್ಲ ಒನ್ಸ್ ಎಗೇಯ್ನ್ ಅಚ್ಚರಿಯಾಗಿರುವುದು ಶಿವರಾಜ್ಕುಮಾರ್ ಅವರ ಎನರ್ಜಿ.
ಶಿವಣ್ಣ ಜೊತೆ ಕಾಣಿಸಿಕೊಳ್ಳೋದೇ ಹೆಮ್ಮೆಯ ಸಂಗತಿ. ನಾನಂತೂ ಎಕ್ಸೈಟ್ ಆಗಿದ್ದೇನೆ. ನರ್ವಸ್ ಕೂಡಾ ಆಗಿದ್ದೇನೆ.
ರಾಧಿಕಾ ಚೇತನ್
ಇದು ಸುದೀಪ್, ಶಿವರಾಜ್ಕುಮಾರ್ ಸಿನಿಮಾ ಅನ್ನೋ ಕಾರಣಕ್ಕೆ ಒಪ್ಪಿಕೊಂಡೆ. ಶೂಟಿಂಗ್ ತುಂಬಾ ಚೆನ್ನಾಗಿತ್ತು. ಆದರೆ, ಶಿವಣ್ಣ ತುಂಬಾ ಫಾಸ್ಟ್ ಆಗಿ ಡ್ಯಾನ್ಸ್ ಮಾಡ್ತಾರೆ. ಅವರ ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕೋದು ಕಷ್ಟ.
ಶ್ರದ್ಧಾ ಶ್ರೀನಾಥ್
ಹಾಡು ರಿಚ್ ಆಗಿ ಮೂಡಿಬಂದಿದೆ. ಇನ್ನೂ ಕೆಲವು ಇಂಟ್ರೆಸ್ಟಿಂಗ್ ವಿಷಯಗಳಿವೆ. ಸದ್ಯಕ್ಕೆ ಅವುಗಳನ್ನು ನಾವು ಬಹಿರಂಗಪಡಿಸುವ ಹಾಗಿಲ್ಲ.
ಭಾವನಾ ರಾವ್
ಶಿವಣ್ಣ ಅವರ ಎನರ್ಜಿಗೆ ತಕ್ಕಂತೆ ಸ್ಟೆಪ್ ಹಾಕೋದು ಅಷ್ಟು ಸುಲಭ ಅಲ್ಲ. ನನಗೆ ಶೂಟಿಂಗ್ ವೇಳೆ ಕಾಲಿಗೆ ಸ್ವಲ್ಪ ಗಾಯವಾಗಿತ್ತು. ಇದರಿಂದಾಗಿ ವೇಗವಾಗಿ ಹೆಜ್ಜೆ ಹಾಕೋಕೆ ಆಗ್ತಾ ಇರಲಿಲ್ಲ. ಆದರೆ, ಶೂಟಿಂಗ್ ಮುಗಿದ ಮೇಲೆ ಗೊತ್ತಾಗಿದ್ದೇನೆಂದರೆ, ಶಿವಣ್ಣಂಗೂ ಅದೇ ರೀತಿ ಆಗಿತ್ತು. ಆದರೆ, ಅದನ್ನು ಅವರು ತೋರಿಸಿಕೊಳ್ಳಲೇ ಇಲ್ಲ.
ಶಾನ್ವಿ ಶ್ರೀವಾಸ್ತವ್
Related Articles :-