` ಓ ಪ್ರೇಮವೇ ಎಂಬ ಅಪ್ಪಟ ಪ್ರೀತಿಯ ಕಥೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
o premave is a true love story
O Premave Movie Image

ಓ ಪ್ರೇಮವೇ ಚಿತ್ರದಲ್ಲಿ ಮನೋಜ್ ಕುಮಾರ್ ಹೀರೋ ಆದರೆ, ನಿಕ್ಕಿ ಗರ್ಲಾನಿ ಹಾಗೂ ಅಪೂರ್ವ ಇಬ್ಬರು ನಾಯಕಿಯರು. ಚಿತ್ರದಲ್ಲಿರೋದು ತ್ರಿಕೋನ ಪ್ರೇಮಕಥೆ. ಒಬ್ಬ ಹುಡುಗಿಗೆ ಪ್ರೀತಿಯೇ ಎಲ್ಲ. ಇನ್ನೊಬ್ಬ ಹುಡುಗಿಗೆ ಪ್ರೀತಿಗಿಂತ ಐಷಾರಾಮಿ ಜೀವನದ ಆಸೆ. ಪ್ರೀತಿಗಾಗಿ ನಡೆಯುವ ಈ ಪ್ರೇಮ ಸಮರದಲ್ಲಿ ಪ್ರೀತಿ ದೊಡ್ಡದಾ..? ಜೀವನ ದೊಡ್ಡದಾ ಎಂಬ ಸಂದೇಶ ಇಟ್ಟುಕೊಂಡು ಮಾಡಿರುವ ಸಿನಿಮಾ ಓ ಪ್ರೇಮವೇ.

ಚಿತ್ರದ ನಾಯಕ, ನಿರ್ದೇಶಕ ಮನೋಜ್ ಈ ಹಿಂದೆ ಮೊಗ್ಗಿನ ಮನಸ್ಸು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಮನೋಜ್, ರವಿಚಂದ್ರನ್ ಅವರ ಅಭಿಮಾನಿ. ರವಿಚಂದ್ರನ್ ಸಿನಿಮಾಗಳಂತೆಯೇ ಇಲ್ಲಿಯೂ ಕಿವಿಗಿಂಪಾದ ಹಾಡುಗಳಿವೆ ಎಂದು ಪ್ರಾಮಿಸ್ ಮಾಡಿದೆ ಚಿತ್ರತಂಡ. ಆನಂದ್ ಮತ್ತು ರಾಹುಲ್ ಬೋಸ್ ಎಂಬ ಇಬ್ಬರು ಕಾಲೇಜು ಹುಡುಗರು, ಸಿನಿಮಾಗೆ ಹಾಡುಗಳನ್ನು ಸಂಯೋಜಿಸಿದ್ದಾರೆ.

ಬೆಂಗಳೂರು, ಮಂಗಳೂರು, ಸ್ವಿಟ್ಜರ್‍ಲ್ಯಾಂಡ್‍ನಲ್ಲಿ ಶೂಟಿಂಗ್ ಮಾಡಿರುವ ಚಿತ್ರತಂಡ, ಹಾಡುಗಳೂ ಸುಂದರವಾಗಿ ಮೂಡಿ ಬಂದಿವೆ ಎಂಬ ಕಾನ್ಫಿಡೆನ್ಸಿನಲ್ಲಿದೆ.