` 80 ಫೈಟರ್‍ಗಳ ಜೊತೆ ನಿಖಿಲ್ ಕುಮಾರಸ್ವಾಮಿ ಫೈಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
nikhil kumaraswamy in seetharama kalyana
Seetharama Kalayana Fight Scene

ನಿಖಿಲ್ ಕುಮಾರಸ್ವಾಮಿ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರದ ಶೂಟಿಂಗ್ ಬಿರುಸಾಗಿ ನಡೆಯುತ್ತಿದೆ. ನಿರ್ದೇಶಕ ಹರ್ಷ ಚಿತ್ರಕ್ಕಾಗಿ ಒಂದು ಸ್ಪೆಷಲ್ ಫೈಟ್ ಸೀನ್ ಆಯೋಜಿಸಿ ಶೂಟ್ ಮಾಡಿಸಿದ್ದಾರೆ. ಒಂದು ಫೈಟ್‍ಗಾಗಿಯೇ 80 ಫೈಟರ್‍ಗಳನ್ನು ಬಳಸಿಕೊಳ್ಳಲಾಗಿದ್ದು, ಜೇಮ್ಸ್‍ಬಾಂಡ್ ಶೈಲಿಯಲ್ಲಿ ನಿಖಿಲ್ ಹೊಡೆದಾಡಿದ್ದಾರೆ.

ರಾಮ್ ಲಕ್ಷ್ಮಣ್ ಸಾಹಸ ಸಂಯೋಜನೆಯ ಈ ಫೈಟ್ ಸೀನ್‍ನಲ್ಲಿ ಗ್ರೇಟ್ ಡೆನ್ ಎಂಬ ನಾಯಿಯೂ ಭಾಗವಹಿಸಿರುವುದು ವಿಶೇಷ.

ಈ ಚಿತ್ರಕ್ಕೆ ನಿಖಿಲ್ ಎದುರು ನಾಯಕಿಯಾಗಿರುವುದು ರಚಿತಾ ರಾಮ್. ಚಿತ್ರಕ್ಕೆ ಸುಮಾರು 20 ಚಿತ್ರಗಳಿಂದ ಸ್ಫೂರ್ತಿ ಪಡೆಯಲಾಗಿದೆ ಎಂದು ಹೇಳಿದ್ದಾರೆ ನಿರ್ಮಾಪಕ ಸುನಿಲ್ ಗೌಡ. ದಿಲ್‍ವಾಲೆ ದುಲ್ಹನಿಯಾ ಲೇ ಜಾಯೇಂಗೆ, ಸೂರ್ಯವಂಶ, ಚಂದ್ರಚಕೋರಿ, ರೇಸುಗುರ್ರಂ.. ಹೀಗೆ ಹಲವು ಚಿತ್ರಗಳ ಸ್ಫೂರ್ತಿ ಚಿತ್ರಕ್ಕಿದೆಯಂತೆ. ಚಿತ್ರದ ಒಂದು ಫೈಟ್ ಸೀನ್‍ಗೇ ಕೋಟಿ ಕೋಟಿ ಖರ್ಚು ಮಾಡಿರುವ ಚಿತ್ರತಂಡ, ಸಿನಿಮಾವನ್ನಂತೂ ಅದ್ಧೂರಿಯಾಗಿ ಚಿತ್ರೀಕರಿಸುತ್ತಿದೆ.

Sagutha Doora Doora Movie Gallery

Popcorn Monkey Tiger Movie Gallery