` ರಾಜರಥಕ್ಕೆ ಸುದೀಪ್ ಕೊಟ್ಟ ಸ್ಫೂರ್ತಿ ಏನ್ ಗೊತ್ತಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sudeep inspires rajaratha team
Sudeep With Rajaratha Team

ರಾಜರಥ ಚಿತ್ರದಲ್ಲಿ ತಮಿಳು ನಟ ಆರ್ಯ ನಟಿಸುತ್ತಿರುವುದು ಗೊತ್ತಿದೆಯಷ್ಟೆ. ಅದು ಆರ್ಯ ಅವರ ಮೊದಲ ಕನ್ನಡ ಸಿನಿಮಾ. ಚಿತ್ರದಲ್ಲಿ ಗಮನ ಸೆಳೆಯುತ್ತಿರುವುದ ಆರ್ಯ ಅವರ ಲುಕ್ಕು. ಏಕೆಂದರೆ, ಆರ್ಯ ಇದುವರೆಗೆ ಪ್ರಣಯರಾಜನಾಗಿ ಕಾಣಿಸಿಕೊಂಡಿರೋದೇ ಹೆಚ್ಚು. ಆದರೆ, ರಾಜರಥದಲ್ಲಿ ಹಾಗಲ್ಲ. 

ಕೇವಲ ಲುಕ್ ಅಷ್ಟೇ ಅಲ್ಲ, ಪಾತ್ರವೂ ವಿಭಿನ್ನವಾಗಿದೆ ಎಂದಿದ್ದಾರೆ ಭಂಡಾರಿ ಬ್ರದರ್ಸ್. 

ಅಂದಹಾಗೆ ಇದಕ್ಕೂ, ಸುದೀಪ್‍ಗೆ ಏನು ಸಂಬಂಧ ಅಂತೀರಾ. ನಿರೂಪ್ ಭಂಡಾರಿ ಹಾಗೂ ಅನೂಪ್ ಭಂಡಾರಿ ಅವರ ತಂದೆ ಸುಧಾಕರ್ ಭಂಡಾರಿ, 90ರ ದಶಕದಲ್ಲಿ ಪ್ರೇಮದ ಕಾದಂಬರಿ ಎಂಬ ಧಾರಾವಾಹಿ ಮಾಡಿದ್ದರು. ಆ ಧಾರಾವಾಹಿಯಲ್ಲಿ ಸುದೀಪ್ ಕೆಲಸ ಮಾಡಿದ್ದರಂತೆ. ಆಗಲೇ ಈ ಇಬ್ಬರೂ ಸೋದರರು ಸುದೀಪ್ ಅವರನ್ನೇ ಮನಸ್ಸಿನಲ್ಲಿಟ್ಟುಕೊಂಡು `ಯೋಧ' ಅನ್ನೋ ಸ್ಕ್ರಿಪ್ಟ್ ತಯಾರಿಸಿದ್ದರಂತೆ. ಸುದೀಪ್ ಪೊಲೀಸ್ ಇನ್ಸ್‍ಪೆಕ್ಟರ್ ಪಾತ್ರಕ್ಕೆ ಚೆನ್ನಾಗಿ ಹೊಂದುತ್ತಾರೆ ಎಂದುಕೊಂಡಿದ್ದರಂತೆ ಭಂಡಾರಿ ಬ್ರದರ್ಸ್.

ಇನ್ನು ವಡ್ರ್ಸ್ ಅನ್ನೋ ಕಿರುಚಿತ್ರಕ್ಕೆ ಅನೂಪ್ ಪ್ರಶಸ್ತಿ ಗೆದ್ದಿದ್ದರು. ಆ ಸುದ್ದಿಗೋಷ್ಟಿಗೆ ಅತಿಥಿಯಾಗಿ ಬಂದಿದ್ದ ಸುದೀಪ್, ಕುರ್ತಾ, ಜೀನ್ಸ್, ಸ್ಯಾಂಡಲ್ ಧರಿಸಿದ್ದರು. ಅದು ಅನೂಪ್‍ಗೆ ಇಷ್ಟವಾಗಿತ್ತು. ನಾವೀಗ ರಾಜರಥ ಚಿತ್ರದಲ್ಲಿನ ಆರ್ಯ ಅವರ ಡ್ರೆಸ್ ಮತ್ತು ಸ್ಟೈಲ್ ಇರೋದು ಅದೇ ಸುದೀಪ್ ಅವರ ಶೈಲಿಯಲ್ಲಿ.

ಇನ್ನು ಆರ್ಯ ಅವರಿಗೆ ಕನ್ನಡ ಅಷ್ಟೇ ಅಲ್ಲ, ತೆಲುಗು ಕೂಡಾ ಅಷ್ಟಕ್ಕಷ್ಟೆ. ಹೀಗಾಗಿ ಚಿತ್ರದ ಪ್ರತಿ ಸನ್ನಿವೇಶವನ್ನೂ ಎಚ್ಚರಿಕೆಯಿಂದ ಅಭ್ಯಾಸ ಮಾಡುತ್ತಿದ್ದರಂತೆ. ಆರ್ಯ ಅವರ ಸಹಾಯಕರೇ, ನಿರ್ದೇಶಕ ಅನೂಪ್ ಭಂಡಾರಿ ಆರ್ಯ ಅವರಿಗೆ ಚಿತ್ರಹಿಂಸೆ ಕೊಡುತ್ತಿದ್ದಾರೆ ಎಂದು ಜೋಕ್ ಮಾಡುತ್ತಿದ್ದರಂತೆ. ಹಾಗೇನೂ ಇಲ್ಲ, ಆರ್ಯ ತಮ್ಮ ಪಾತ್ರವನ್ನು ಜೀವಿಸಿದ್ದಾರೆ. ನಾನು ಕಂಡ ಸರಳ ಮತ್ತು ಶಿಸ್ತಿನ ವ್ಯಕ್ತಿಗಳಲ್ಲಿ ಆರ್ಯ ಒಬ್ಬರು. ನಿರ್ದೇಶಕರು ಹೇಳಿದಂತೆ ನಟಿಸುವ ಒಳ್ಳೆಯ ಕಲಾವಿದ ಎಂದು ಪ್ರಶಂಸಿಸಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ.

ಸಿನಿಮಾ ಮಾರ್ಚ್ 23ರಂದು ತೆರೆಗೆ ಬರಲಿದೆ. ಆವಂತಿಕಾ ಶೆಟ್ಟಿ ನಾಯಕಿಯಾಗಿರುವ ಚಿತ್ರದಲ್ಲಿ ನಿರೂಪ್ ಭಂಡಾರಿಯವರ ಪಾತ್ರ ಕುತೂಹಲ ಹುಟ್ಟಿಸಿದೆ. ಆ್ಯಕ್ಷನ್, ಕಾಮಿಡಿ, ರೊಮ್ಯಾನ್ಸ್ ಮತ್ತು ಮ್ಯೂಸಿಕ್ ಮಯ ಚಿತ್ರದಲ್ಲಿ ರವಿಶಂಕರ್ ಅವರದ್ದು ಅತ್ಯಂತ ಪ್ರಮುಖ ಪಾತ್ರ. 

Adachanege Kshamisi Teaser Launch Gallery

Mataash Movie Gallery