sಶಿವರಾಜ್‍ಕುಮಾರ್ ಹೆಜ್ಜೆ ಹಾಕೋಕೆ ನಿಂತರೆ ಯುವಕರೂ ನಾಚಬೇಕು. ಡ್ಯಾನ್ಸ್ ಬರದೇ ಇರುವವರು ಜೊತೆಗಿದ್ದರೆ, ಅನುಮಾನವೇ ಅಲ್ಲ, ಅದು ಕಷ್ಟಾನೇ. ಈಗ ಅಂತಹ ಶಿವಣ್ಣ ಜೊತೆ ಹೆಜ್ಜೆ ಹಾಕೋಕೆ ಸ್ಯಾಂಡಲ್‍ವುಡ್‍ನ ಮೂವರು ಸುಂದರಿಯರು ರೆಡಿಯಾಗಿದ್ದಾರೆ.
ಬುಲ್‍ಬುಲ್ ರಚಿತಾ ರಾಮ್, ರಂಗಿತರಂಗ ರಾಧಿಕಾ ಚೇತನ್ ಹಾಗೂ ಯು ಟರ್ನ್ ಶ್ರದ್ಧಾ ಶ್ರೀನಾಥ್. ಈ ಮೂವರೂ ಶಿವಣ್ಣ ಜೊತೆ ಸ್ಪೆಷಲ್ ಸಾಂಗ್‍ಗೆ ಹೆಜ್ಜೆ ಹಾಕುತ್ತಿದ್ದಾರೆ. ದಿ ವಿಲನ್ ಚಿತ್ರದ ಶೂಟಿಂಗ್‍ನ ಈಗಿನ ವೇಗ ನೋಡಿದರೆ, ಸಿನಿಮಾ ಶೂಟಿಂಗ್ ಮಾರ್ಚ್ ಕೊನೆಗೆ ಮುಗಿಯುವುದು ಹೆಚ್ಚೂ ಕಡಿಮೆ ಪಕ್ಕಾ. ಆಮೇಲೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಲಿದೆ.