` ಪುನೀತ್ ಹೇರ್‍ಸ್ಟೈಲ್ ಮೊದಲ ಪ್ರಯೋಗ ಯಾರ ಮೇಲೆ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puneeth's hair style experiment on pavan wodeyar
Puneeth Rajkumar, Pavan Wodeyar Image

ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ, ಪವನ್ ಒಡೆಯರ್ ನಿರ್ದೇಶನದ ಹೊಸ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅವರ ವಿಭಿನ್ನ ಹೇರ್‍ಸ್ಟೈಲ್ ಸದ್ದು ಮಾಡುತ್ತಿರುವಾಗಲೇ ಒಂದು ಸ್ವಾರಸ್ಯ ಹೊರಬಿದ್ದಿದೆ. ಚಿತ್ರದ ಕಥೆ ಮತ್ತು ಪಾತ್ರದ ವ್ಯಕ್ತಿತ್ವ ತಿಳಿಸುವಂತೆ ಹೇರ್‍ಸ್ಟೈಲ್ ಇರಬೇಕು ಎಂದು ಪವನ್ ಹೇಳಿದರಂತೆ. ಪುನೀತ್ ಓಕೆ ಎಂದರು. ಅದಾದ ಮೇಲೆ ಡಿಸೈನ್ ರೆಡಿ ಆಯ್ತು.

ಆದರೆ, ಡಿಸೈನ್ ರೆಡಿ ಆದ ಮೇಲೆ ಪ್ರಯೋಗವಾಗಬೇಕಲ್ಲ.. ಪ್ರಯೋಗಕ್ಕೆ  ಯಾರನ್ನು ಹುಡುಕೋದು..? ಆಗ ಮೊದಲ ಪ್ರಯೋಗಕ್ಕೆ ಒಳಗಾಗಿದ್ದು ಸ್ವತಃ ಪವನ್ ಒಡೆಯರ್. 

ಅದು ಕೇವಲ ಪ್ರಯೋಗವಲ್ಲ. ಸ್ಪೀಡ್ ಇಂಡಿಕೇಷನ್ ಹೇರ್‍ಸ್ಟೈಲ್. ನಾಯಕನ ಪಾತ್ರದ ವೇಗಕ್ಕೆ ಸರಿಯಾಗಿ ಹೊಂದುವ ಸ್ಟೈಲ್. ಇಡೀ ಚಿತ್ರದಲ್ಲಿ ಪುನೀತ್ ಇದೇ ಹೇರ್‍ಸ್ಟೈಲ್‍ನಲ್ಲಿರುತ್ತಾರೆ ಎಂದು ತಿಳಿಸಿದ್ದಾರೆ ಪವನ್ ಒಡೆಯರ್.

Related Articles :-

ಪುನೀತ್ ಹೊಸ ಲುಕ್ ಸಖತ್ ಸ್ಟೈಲಿಶ್

Adachanege Kshamisi Teaser Launch Gallery

Mataash Movie Gallery