ಕಿಚ್ಚ ಸುದೀಪ್ ಹಾಗೂ ನಿತ್ಯಾ ಮೆನನ್ ಅಭಿನಯದ ಕೋಟಿಗೊಬ್ಬ-2 ಚಿತ್ರ, ಕನ್ನಡದಲ್ಲಿ ಸೂಪರ್ ಹಿಟ್ ಆಗಿತ್ತು. ಬಾಕ್ಸಾಫೀಸ್‍ನಲ್ಲೂ ದಾಖಲೆ ಬರೆದಿತ್ತು. ಈಗ ಅದೇ ಸಿನಿಮಾ ತೆಲುಗಿಗೆ ಕೋಟಿಕೊಕ್ಕುಡು ಹೆಸರಿನಲ್ಲಿ ರಿಲೀಸ್ ಆಗಿದೆ. ತೆಲುಗಿನಲ್ಲಿ ಈಗಾಗಲೇ ಥಿಯೇಟರ್‍ನಲ್ಲಿ ಅಭಿಮಾನಿಗಳನ್ನು ಆಕರ್ಷಿಸಿರುವ ಕೋಟಿಕೊಕ್ಕುಡು ಚಿತ್ರವನ್ನು ಖ್ಯಾತ ನಿರ್ಮಾಪಕ ಬಿಎ ರಾಜು ವಿತರಣೆ ಮಾಡಿದ್ದಾರೆ.
ಈಗ ಚಿತ್ರದ ನಂತರ ತೆಲುಗಿನಲ್ಲೂ ದೊಡ್ಡ ಮಾರ್ಕೆಟ್ ಸೃಷ್ಟಿಸಿಕೊಂಡಿರುವ ಸುದೀಪ್ ಸಿನಿಮಾ, ತೆಲುಗಿನಲ್ಲೂ ದಾಖಲೆ ಬರೆಯುವ ಸನ್ನಾಹದಲ್ಲಿದೆ. ಚಿತ್ರತಂಡಕ್ಕೆ ಶುಭ ಕೋರಿದ್ದಾರೆ ಕಿಚ್ಚ ಸುದೀಪ್.