` ಶಿವರಾಜ್‍ಕುಮಾರ್‍ಗೆ ಪಂಜಾಬಿ ಬೆಡಗಿ ನಾಯಕಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
punjabi model is heroine for shivarajkumar
Ihana Dillon, Shivarajkumar Image

ಶಿವ ರಾಜ್‍ಕುಮಾರ್ ಅಭಿನಯದ ಹೊಸ ಚಿತ್ರಕ್ಕೆ ಪಂಜಾಬಿ ಬೆಡಗಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಹೇಟ್‍ಸ್ಟೋರಿ-4 ಚಿತ್ರದಲ್ಲಿ ನಟಿಸಿರುವ ಪಂಜಾಬಿ ಮಾಡೆಲ್ ಇಹಾನಾ ದಿಲ್ಲೋನ್, ಶಿವಣ್ಣ ಹೊಸ ಚಿತ್ರಕ್ಕೆ ನಾಯಕಿ. ಶಿವರಾಜ್‍ಕುಮಾರ್ ಕೈಲಿ ಹಲವಾರು ಚಿತ್ರಗಳಿವೆ. ಅವುಗಳಲ್ಲಿ ಯಾವ ಚಿತ್ರ..? ಅದು ಸದ್ಯಕ್ಕೆ ಸಸ್ಪೆನ್ಸ್.

ಮೂಲತಃ ಪಂಜಾಬ್‍ನವರಾದ ಇಹಾನಾ, ಹಲವು ಪಂಜಾಬಿ ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾಗಿಂತ ಹೆಚ್ಚಾಗಿ ಜಾಹೀರಾತು ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿಯೇ ಹೆಚ್ಚು ಗುರುತಿಸಿಕೊಂಡಿದ್ದಾರೆ. 

ಹೇಟ್‍ಸ್ಟೋರಿ-4ನಲ್ಲಿ ಅತ್ಯಂತ ಬೋಲ್ಡ್ ಆಗಿ ನಟಿಸಿರುವ ಇಹಾನಾ, ಪಾತ್ರ ಬಯಸಿದರೆ, ಎಂಥ ದೃಶ್ಯವಾದರೂ ಓಕೆ ಅಂತಾರೆ. ಶಿವರಾಜ್‍ಕುಮಾರ್ ಜೊತೆ ಒಂದು ಚಿತ್ರ ಹಾಗೂ ಇನ್ನೊಬ್ಬ ಸ್ಟಾರ್ ಜೊತೆ ಮತ್ತೊಂದು ಚಿತ್ರಕ್ಕೆ ಓಕೆ ಎಂದಿದ್ದೇನೆ ಎಂದಿದ್ದಾರೆ ಇಹಾನಾ. 

ಒಟ್ಟಿನಲ್ಲಿ ಬಾಲಿವುಡ್‍ನಿಂದ ಕನ್ನಡಕ್ಕೆ ಆರಂಭದಲ್ಲಿಯೇ ಹೆಜ್ಜೆಯಿಡುತ್ತಿದ್ದಾರೆ ಇಹಾನಾ ದಿಲ್ಲೋನ್.

Kaalidasa Kannada Mestru Pressmeet Gallery

Kabza Movie Launch Gallery