ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳ ಸದಾ ಒಂದು ನಂಟನ್ನು ಇಟ್ಟುಕೊಂಡೇ ಇರ್ತಾರೆ. ಇದರ ಮಧ್ಯೆಯೂ ಅಭಿಮಾನಿಗಳು ಕಿಚ್ಚನನ್ನು ನೋಡಲು, ಮಾತನಾಡಿಸಲು ಹಠ ಮಾಡುವುದು ಹೊಸದೇನೂ ಅಲ್ಲ. ಈ ಬಾರಿ ಶಿವು ಎಂಬ ಸುದೀಪ್ ಅಭಿಮಾನಿ, ಕಿಚ್ಚ ಸುದೀಪ್ ತನ್ನನ್ನು ನೋಡುವವರೆಗೂ ಉಪವಾಸ ಮಾಡೋದಾಗಿ ಹಠ ಹಿಡಿದು ಕುಳಿತುಬಿಟ್ಟಿದ್ದಾನೆ.
ಆದರೆ, ಈ ಕ್ಷಣವೇ ಹೋಗಬೇಕು ಎಂದರೆ ಹೇಗೆ..? ಹೀಗಾಗಿ ಸುದೀಪ್ ಅಭಿಮಾನಿಗೆ ಟ್ವಿಟರ್ ಮೂಲಕವೇ ಮನವಿ ಮಾಡಿದ್ದಾರೆ. ಭೇಟಿ ಮಾಡಲು ಪ್ರೀತಿ, ತಾಳ್ಮೆಯ ಜೊತೆ ಸಮಯವೂ ಬೇಕು ಎಂದು ಬುದ್ದಿ ಹೇಳಿದ್ದಾರೆ. ನೀವು ಚೆನ್ನಾಗಿದ್ದರೆ ನನಗೆ ಖುಷಿ. ಉಪವಾಸ ಮಾಡಿ ನನಗೆ ನೋವು ಕೊಡಬೇಡಿ ಎಂದು ಮನವಿ ಮಾಡಿದ್ದಾರೆ ಕಿಚ್ಚ ಸುದೀಪ್.