` ನಾಳೆ (ಮಾ.9) ಯಾವುದೇ ಸಿನಿಮಾ ಇರಲ್ಲ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
no cinema tomorrow
No Cinema In Theater Tomorrow

ನಾಳೆ ಅಂದರೆ ಮಾರ್ಚ್ 9ನೇ ತಾರೀಕು, ನಿಮಗೆ ಯಾವುದೇ ಸಿನಿಮಾ ಥಿಯೇಟರ್‍ನಲ್ಲಿ ನೋಡೋಕೆ ಸಾಧ್ಯವಿಲ್ಲ. ಎಲ್ಲ ಚಿತ್ರಮಂದಿರಗಳಲ್ಲೂ ಚಿತ್ರ ಪ್ರದರ್ಶನ ಬಂದ್. ಈಗ ಪ್ರದರ್ಶನವಾಗುತ್ತಿರುವ ಚಿತ್ರಗಳೂ ನಾಳೆ ಅಂದರೆ ಶುಕ್ರವಾರ ಪ್ರದರ್ಶನ ಮಾಡೋದಿಲ್ಲ. ಯಾವುದೇ ಹೊಸ ಸಿನಿಮಾ ರಿಲೀಸ್ ಆಗುವುದಿಲ್ಲ. 

ಇದೆಲ್ಲ ನಡೆಯುತ್ತಿರುವ ಯುಎಫ್‍ಓ ಮತ್ತು ಕ್ಯೂಬ್ ಸಂಸ್ಥೆಗಳ ವಿರುದ್ಧದ ಹಠಮಾರಿತನದ ವಿರುದ್ಧ. ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನದ ತಾಂತ್ರಿಕ ಸೇವೆ ಒದಗಿಸುವ ಸಂಸ್ಥೆಗಳು ದುಬಾರಿ ಶುಲ್ಕ ವಿಧಿಸುತ್ತಿದ್ದು, ಇದನ್ನು ಕಡಿಮೆ ಮಾಡುವ ಚಿತ್ರ ನಿರ್ಮಾಪಕರ ಬೇಡಿಕೆಗೆ ಮಣಿದಿಲ್ಲ. ಹೀಗಾಗಿ ಚಿತ್ರರಂಗ ಈ ನಿರ್ಧಾರ ಕೈಗೊಂಡಿದೆ.

ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳ ಬಿಡುಗಡೆ ಕಳೆದ ವಾರದಿಂದಲೇ ಬಂದ್ ಆಗಿದೆ. ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗ ಈ ವಾರದಿಂದ ಹೊಸ ಚಿತ್ರಗಳ ಬಿಡುಗಡೆ ಸ್ಥಗಿತ ಮಾಡಿದೆ.

ಅಂದಹಾಗೆ ಚಿತ್ರ ಪ್ರದರ್ಶನ ಬಂದ್ ಅನ್ವಯವಾಗುವುದು ಕನ್ನಡ ಚಿತ್ರಗಳಿಗೆ ಮಾತ್ರ. ಇವುಗಳನ್ನು ಹೊರತುಪಡಿಸಿ ಪ್ರದರ್ಶನಗೊಳ್ಳುತ್ತಿರುವ ಬೇರೆ ಭಾಷೆಯ ಚಿತ್ರಗಳಿಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ. ಅವುಗಳ ಪ್ರದರ್ಶನಕ್ಕೆ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು. ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರು ಈ ಬಂದ್‍ಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery