ಕಾಮಿಡಿ ಚಿತ್ರಗಳೆಂದರೆ ಈಗ ತಕ್ಷಣ ನೆನಪಾಗುವುದು ನಟ ಶರಣ್. ಸದಾ ಬ್ಯುಸಿಯಾಗಿರುವ ಶರಣ್ ಅಭಿನಯದ ಹೊಸ ಚಿತ್ರವೊಂದು ಸೆಟ್ಟೇರಿದೆ. ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಚಿತ್ರದ ನಿರ್ದೇಶಕ ಸಂತು. ನಿರ್ಮಾಪಕ ತರುಣ್ ಶಿವಪ್ಪ.
ಮಾಸ್ ಲೀಡರ್ ಚಿತ್ರದ ನಂತರ ತರುಣ್ ಶಿವಪ್ಪ ನಿರ್ಮಿಸುತ್ತಿರುವ ಸಿನಿಮಾ ಇದು. ಕಾಲೇಜ್ ಕುಮಾರ ನಂತರ ಸಂತು ನಿರ್ದೇಶಿಸುತ್ತಿರುವ ಸಿನಿಮಾಗೆ ಶರಣ್ ಹೀರೋ. ಇನ್ನು ಕಾಲೇಜ್ ಕುಮಾರ ಚಿತ್ರದ ರಿಯಲ್ ಹೀರೋ ಆಗಿದ್ದ ರವಿಶಂಕರ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
ಸಾಧುಕೋಕಿಲ, ತಬಲಾ ನಾಣಿ, ಪ್ರಶಾಂತ್ ಸಿದ್ಧಿ ಮೊದಲಾದವರು ನಟಿಸುತ್ತಿರುವ ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನೂ ಫೈನಲ್ ಆಗಿಲ್ಲ. ತರುಣ್ ಸುಧೀರ್ ಕಥೆ ಮತ್ತು ಚಿತ್ರಕಥೆ ಇರುವ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ.