ಶಿವರಾಜ್‍ಕುಮಾರ್, ಸೂರಿ ಕಾಂಬಿನೇಷನ್‍ನ ಟಗರು ವಿಭಿನ್ನತೆಯಿಂದಾಗಿಯೇ ಗುಟುರು ಹಾಕುತ್ತಿದೆ. ಬಾಕ್ಸಾಫೀಸ್‍ನಲ್ಲಿ ಜೋರು ಸದ್ದು ಮಾಡುತ್ತಿದೆ. ಸ್ವತಃ ಶಿವರಾಜ್‍ಕುಮಾರ್ ಸೇರಿದಂತೆ ಎಲ್ಲರನ್ನೂ ಅಭಿಮಾನಿಗಳು ಅವರವರ ಪಾತ್ರಗಳ ಮೂಲಕವೇ ಗುರುತಿಸುತ್ತಿರುವುದು ವಿಶೇಷ. ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್ ಕೂಡಾ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಇನ್ನು ಕಿಚ್ಚ ಸುದೀಪ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಚಿತ್ರವನ್ನು ನೋಡಿ, ಚಿತ್ರದ ಬಗ್ಗೆ ಸ್ವತಃ ವಿಮರ್ಶೆ ಬರೆದಿದ್ದಾರೆ ಸುದೀಪ್.
ಸಿನಿಮಾದ ನಿರೂಪಣೆ ತುಂಬಾ ಚೆನ್ನಾಗಿದೆ. ತೆರೆಯ ಮೇಲೆ ಬರುವ ಪ್ರತಿ ಪಾತ್ರವೂ ಜನರನ್ನು ಕನ್‍ಫ್ಯೂಸ್ ಮಾಡುತ್ತೆ. ವಿಭಿನ್ನವಾಗಿ ಕಥೆ ಹೇಳುವ ಪ್ರಯತ್ನ ಚೆನ್ನಾಗಿದೆ ಹಾಗೂ ಅದರಲ್ಲಿ ಸೂರಿ ಗೆದ್ದಿದ್ದಾರೆ.
ಇನ್ನು ಶಿವರಾಜ್‍ಕುಮಾರ್ ಎನರ್ಜಿ, ಅಭಿನಯ ವಂಡರ್‍ಫುಲ್. ತೆರೆಯ ಮೇಲೆ ಅದ್ಭುತವಾಗಿ ಕಾಣಿಸುತ್ತಾರೆ. ಧನಂಜಯ್ ಪಾತ್ರ ಮತ್ತು ಅಭಿನಯ ಎರಡೂ ಚೆನ್ನಾಗಿವೆ. ವಸಿಷ್ಠ ಸಿಂಹ ಅವರ ಧ್ವನಿ ಎಲ್ಲರ ಗಮನ ಸೆಳೆಯುತ್ತದೆ. ಚಿತ್ರದ ಸಂಗೀತ ಎಲ್ಲರ ಗಮನ ಸೆಳೆಯುತ್ತದೆ. ಸಂಗೀತ ನೀಡಿದ ಚರಣ್‍ರಾಜ್‍ಗೆ ನನ್ನ ಅಭಿನಂದನೆ.
ಇದು ಕಿಚ್ಚನ ವಿಮರ್ಶೆ. ಕನ್ನಡದ ಮಟ್ಟಿಗೆ ಈ ರೀತಿಯ ನಡೆ ನಿಜಕ್ಕೂ ಹೊಸತು. ಒಬ್ಬ ಸ್ಟಾರ್‍ನ ಚಿತ್ರವನ್ನು ಇನ್ನೊಬ್ಬ ಸ್ಟಾರ್ ನೋಡುವುದು ಹಾಗೂ ಅದಕ್ಕೆ ವಿಮರ್ಶೆ ಮಾಡುವುದು ಕನ್ನಡಕ್ಕೆ ನಿಜವಾಗಿಯೂ ಹೊಸತು. ಕಿಚ್ಚ ಸುದೀಪ್ ಈ ಮೂಲಕ ಮತ್ತೊಂದು ಸತ್ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.