ಕತೆಯೊಂದು ಶುರುವಾಗಿದೆ.. ಇದು ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ಕಾಂಬಿನೇಷನ್‍ನ ಸಿನಿಮಾ. ಕಥೆ, ಚಿತ್ರಕಥೆಗಳಿಗೇ ಹೆಚ್ಚು ಆದ್ಯತೆ ಕೊಡುತ್ತಿರುವ ಪುಷ್ಕರ್-ರಕ್ಷಿತ್ ಜೋಡಿ, ಈ ಚಿತ್ರವನ್ನೂ ಹಾಗೆಯೇ ಒಪ್ಪಿಕೊಂಡು ನಿರ್ಮಿಸಿದೆ. ಚಿತ್ರಕ್ಕೆ ಅವರು ಎಷ್ಟರಮಟ್ಟಿಗೆ ಸಿದ್ಧರಾಗಿದ್ದರು ಎಂದರೆ, ಮೂವತ್ತೇ ದಿನಕ್ಕೆ ಶೂಟಿಂಗ್ ಮುಗಿದೇ ಹೋಗಿದೆ.
ಚಿತ್ರದ ಬಗ್ಗೆ ಸಂಪೂರ್ಣ ಪೂರ್ವತಯಾರಿ ಆಗಿತ್ತು. ಯಾವ ಸೀನ್‍ಗೆ ಎಷ್ಟು ಶಾಟ್ ಬೇಕು ಎನ್ನುವುದು ಕೂಡಾ ನಿರ್ಧಾರವಾಗಿ ಹೋಗಿತ್ತು. ಪ್ರತಿಯೊಂದನ್ನೂ ತಯಾರಿ ಮಾಡಿಕೊಂಡರೆ, 30 ದಿನಗಳಲ್ಲಿ ಶೂಟಿಂಗ್ ಮುಗಿಸುವುದು ಕಷ್ಟವೇನಲ್ಲ ಅಂತಾರೆ ನಿರ್ದೇಶಕ ಸೆನ್ನಾ ಹೆಗ್ಡೆ.
ಚಿತ್ರಕ್ಕೆ ದಿಗಂತ್ ಹೀರೋ ಆದರೆ, ಪೂಜಾ ದೇವರಿಯಾ ನಾಯಕಿ. ಸಚಿನ್ ವಾರಿಯರ್ ಸಂಗೀತವಿರುವ ಚಿತ್ರಕ್ಕೆ ಕಿರಣ್ ಕಾವೇರಪ್ಪ ಸಾಹಿತ್ಯ ಹಾಗೂ ಅಭಿಜಿತ್ ಮಹೇಶ್ ಸಂಭಾಷಣೆ ಇದೆ.