ಧ್ವಜ. ಪ್ರಿಯಾಮಣಿ ಅಭಿನಯದ ಈ ಚಿತ್ರದಲ್ಲಿ ಪ್ರಿಯಾಮಣಿ ನಟಿಸಿದ್ದಾರೆ, ರಾಜಕಾರಣಿಯ ಪಾತ್ರದಲ್ಲಿದ್ದಾರೆ ಹಾಗೂ ಆ ಪಾತ್ರದ ಹೆಸರು ರಮ್ಯಾ. ಇಂಥಾದ್ದೊಂದು ಸುದ್ದಿ ಹೊರಬಿದ್ದಿದ್ದೇ ತಡ, ಧ್ವಜ ಚಿತ್ರದಲ್ಲಿ ರಮ್ಯಾ ರಾಜಕೀಯ ಜೀವನದ ಕಥೆ ಇದೆಯಂತೆ ಅನ್ನೋ ಸುದ್ದಿಗೆ ರೆಕ್ಕೆಪುಕ್ಕ ಬಂದುಬಿಟ್ಟಿತ್ತು. ಈ ಆ ಎಲ್ಲ ಸುದ್ದಿಗೂ ನಟಿ ಪ್ರಿಯಾಮಣಿ ಫುಲ್‍ಸ್ಟಾಪ್ ಇಟ್ಟಿದ್ದಾರೆ.
ಇದು ರಮ್ಯಾ ಅವರ ಕುರಿತ ಸಿನಿಮಾ ಅಲ್ಲ. ಚಿತ್ರದ ನಾಯಕಿಯ ಪಾತ್ರದ ಹೆಸರು ರಮ್ಯಾ ಅಷ್ಟೆ. ರಾಜಕಾರಣಿಯ ಪಾತ್ರವಾಗಿದ್ದರಿಂದ ಕ್ಯಾಚಿಯಾಗಿರಲಿ ಎಂದು ನಿರ್ದೇಶಕ ಅಶೋಕ್ ಕಶ್ಯಪ್ ರಮ್ಯಾ ಎಂದು ಹೆಸರಿಟ್ಟರು. ಅದರ ಹೊರತಾಗಿ ಚಿತ್ರಕ್ಕೂ, ರಮ್ಯಾ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ ಪ್ರಿಯಾಮಣಿ.
ಇದು ತಮಿಳಿನ ಕೋಡಿ ಚಿತ್ರದ ರೀಮೇಕ್. ತಮಿಳಿನಲ್ಲಿಧನುಷ್-ತ್ರಿಷಾ ನಟಿಸಿದ್ದ ಚಿತ್ರ. ಕನ್ನಡದಲ್ಲಿ ಪ್ರಿಯಾಮಣಿ ಹಾಗೂ ಹೊಸ ಪ್ರತಿಭೆ ರವಿ ನಟಿಸಿದ್ದಾರೆ.