ಎಸ್.ನಾರಾಯಣ್ ತಮ್ಮ ಮಗನ ಅಭಿನಯದ ಹೊಸ ಚಿತ್ರವೊಂದನ್ನು ಅನೌನ್ಸ್ ಮಾಡಿರುವುದು ಹಳೆಯ ಸುದ್ದಿ. ಆ ಚಿತ್ರದ ಟೈಟಲ್ ಹೇಳಿದವರಿಗೆ 1 ಲಕ್ಷ ರೂ. ಮೌಲ್ಯದ ಡೈಮಂಡ್ ನೆಕ್ಲೆಸ್ ಕೊಡುವುದಾಗಿ ಘೋಷಿಸಿದ್ದರು ನಾರಾಯಣ್. ಈಗ ಚಿತ್ರದ ಟೈಟಲ್ ಫಿಕ್ಸ್ ಆಗಿದೆ. ಬಹುಮಾನ ಪಡೆಯುವವರ ಆಯ್ಕೆಯೂ ಆಗಿದೆ. ಸದ್ಯಕ್ಕೆ ಅದನ್ನು ತಮ್ಮ ಮನಸ್ಸಿನಲ್ಲೇ ಭದ್ರವಾಗಿಟ್ಟುಕೊಂಡಿರುವ ನಾರಾಯಣ್, ಈಗ ನಾಯಕಿಯ ಹುಡುಕಾಟಕ್ಕಿಳಿದಿದ್ದಾರೆ.
ನಾಯಕಿಯಾಗಬಯಸುವವರು ನೇರವಾಗಿ ಮಾರ್ಚ್ 9ನೇ ತಾರೀಕು ಮಲ್ಲೇಶ್ವರಂಗೆ ಹೋಗಬಹುದು. ಅದಕ್ಕೂ ಮೊದಲು ಯುವತಿಯರು ತಮ್ಮ ಎರಡು ಫೋಟೋಗಳನ್ನು ಕಳುಹಿಸಿಕೊಡಬೇಕು. ಆಯ್ಕೆಯಾದವರಿಗೆ ಅಡಿಷನ್ ಕಡ್ಡಾಯವಾಗಿರುತ್ತೆ. ಅರ್ಹತೆಗಳು ಸರಳವಾಗಿಯೇ ಇವೆ. 18ರಿಂದ 21 ವರ್ಷ ವಯಸ್ಸಿನೊಳನವಾಗಿರಬೇಕು. ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಇರಬೇಕು. ಅಭಿನಯದ ಬೇಸಿಕ್ಸ್ ಗೊತ್ತಿರಲೇಬೇಕು.
ಹೆಚ್ಚಿನ ಮಾಹಿತಿ ಬೇಕು ಎಂದರೆ, ಹರ್ಷ ಎಂಬುವವರ ಈ ನಂಬರ್‍ಗೆ (814057335 ) ಕರೆ ಮಾಡಿ ವಿವರ ಪಡೆದುಕೊಳ್ಳಿ. ಮಲ್ಲೇಶ್ವರಂನ 17ನೇ ಕ್ರಾಸ್, #3ರಲ್ಲಿ ಪ್ರತಿಭೆಗಳ ಆಯ್ಕೆ ನಡೆಯಲಿದೆ.
ಅಂದಹಾಗೆ ಇದು ಎಸ್.ನಾರಾಯಣ್ ನಿರ್ದೇಶನದ 50ನೇ ಚಿತ್ರ. ಪಂಕಜ್ ನಾರಾಯಣ್ ಹೀರೋ.