ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಿರ್ಮಾಪಕ ಕನಕಪುರ ಶ್ರೀನಿವಾಸ್ ನಡುವಣ ಚೆಕ್ ಬೌನ್ಸ್ ಕೇಸ್ ಈಗ ಕೋರ್ಟ್‍ನಲ್ಲಿದೆ. ಕನಕಪುರ ಶ್ರೀನಿವಾಸ್, ದನಕಾಯೋನು ಚಿತ್ರಕ್ಕೆ ಕೊಡಬೇಕಾದ ಸಂಭಾವನೆ ಚುಕ್ತಾ ಮಾಡಿಲ್ಲ. ಹಲವು ಬಾರಿ ಕೊಡುತ್ತೇನೆ ಎಂದು ಹೇಳಿ ಕೊಟ್ಟಿಲ್ಲ. ಕೊಟ್ಟಿದ್ದ ಚೆಕ್‍ಗಳೂ ಬೌನ್ಸ್ ಆಗಿವೆ ಎಂದು ಭಟ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಫಿಲಂ ಚೇಂಬರ್ ಸಂಧಾನವೂ ಯಶಸ್ವಿಯಾಗಲಿಲ್ಲ ಅನ್ನೋದು ಈಗಾಗಲೇ ಗೊತ್ತಿರುವ ವಿಚಾರ. ಈ ಕುರಿತಂತೆ ಶ್ರೀನಿವಾಸ್ ಮಾತನಾಡಿದ್ದಾರೆ.
ನಾನು 3 ತಿಂಗಳು ಟೈಂ ಕೇಳಿದ್ದೆ. ಕೊಡಲಿಲ್ಲ. ಆಗ ಅವರು ಕೋರ್ಟ್‍ಗೆ ಹೋಗ್ತೀನಿ ಅಂದ್ರು. ಹೋಗಿ ಅಂದೆ. ಅಷ್ಟೆ.. ಎಂದಿದ್ದಾರೆ ಶ್ರೀನಿವಾಸ್. ದನಕಾಯೋನು ಚಿತ್ರದಿಂದ ನನಗೆ ಲಾಭವಾಗಲಿಲ್ಲ ಎಂದು ಕೂಡಾ ಹೇಳಿಕೊಂಡಿದ್ದಾರೆ.