ಭರ್ಜರಿ, ಧ್ರುವ ಸರ್ಜಾಗೆ ಹ್ಯಾಟ್ರಿಕ್ ಹಿಟ್ ನೀಡಿದ ಚಿತ್ರ. ರಚಿತಾ ರಾಮ್, ಹರಿಪ್ರಿಯಾ ನಟಿಸಿದ್ದ ಚಿತ್ರ, ಶತದಿನೋತ್ಸವವನ್ನಾಚರಿಸಿತ್ತು. ಆಗ ಕೇಳಿಬಂದಿದ್ದ ಸುದ್ದಿಯೇನೆಂದರೆ, ಭರ್ಜರಿ 50 ಕೋಟಿ ಕಲೆಕ್ಷನ್ ಮಾಡಿದೆ ಅನ್ನೋದು. ಈ ಕುರಿತು ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಬಾಯ್ಬಿಟ್ಟಿದ್ದಾರೆ.
ಭರ್ಜರಿ 50 ಕೋಟಿ ಕಲೆಕ್ಷನ್ ಮಾಡಿಲ್ಲ. ಚಿತ್ರಕ್ಕೆ 17 ಕೋಟಿ ಖರ್ಚು ಮಾಡಿದ್ದೆ. 21 ಕೋಟಿ ಬಂತು. ಲಾಭ ಎಂದು ನನಗೆ ಸಿಕ್ಕಿದ್ದು 3 ಕೋಟಿ ಮಾತ್ರ ಎಂದಿದ್ದಾರೆ ಶ್ರೀನಿವಾಸ್.
ಕೋಟಿ ಕೋಟಿ ಕಲೆಕ್ಷನ್ ಆಯ್ತು ಎಂದು ಮಾತನಾಡಿಬಿಟ್ಟರೆ, ಸಂಭಾವನೆ ಹೆಚ್ಚುತ್ತೆ ಅನ್ನೋದು ಕಾರಣ ಇರಬಹುದೇನೋ ಎಂದು ಧ್ರುವ ಸರ್ಜಾರತ್ತಲೇ ಬ್ಯಾಟು ಬೀಸಿದ್ದಾರೆ. ಸಂಭಾವನೆ ಹೆಚ್ಚಿಸಿಕೊಳ್ಳೋಕೆ ಬೋಗಸ್ ಫಿಗರ್ ಕೊಡಬಾರದು. ಹಾಗೆ ಹೇಳಿದವರಿಗೆ ಉಗೀರಿ ಎಂದಿದ್ದಾರೆ ಕನಕಪುರ ಶ್ರೀನಿವಾಸ್.