ಕೆ.ಮಂಜು ಅವರ ಪುತ್ರ ಶ್ರೇಯಸ್, ಪಡ್ಡೆಹುಲಿ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತಿರುವಂಥದ್ದೇ. ಶ್ರೇಯಸ್‍ಗಿದು ಮೊದಲ ಸಿನಿಮಾ. ಆದರೆ, ಶ್ರೇಯಸ್ ಧೈರ್ಯಕ್ಕೆ ಇಡೀ ಚಿತ್ರರಂಗ ಬೆರಗಾಗಿ ಹೋಗಿದೆ.
ಚಿತ್ರದ ಚಿತ್ರೀಕರಣಕ್ಕೆ ಮುನ್ನ ಹಾಡು ಮತ್ತು ಪ್ರೋಮೋಗೆ ಪ್ರತ್ಯೇಕ ಶೂಟಿಂಗ್ ನಡೆಸಲಾಗಿದೆ. ಈ ವೇಳೆ ಶ್ರೇಯಸ್, ಮೈಗೆಲ್ಲ ಬೆಂಕಿ ಹಚ್ಚಿಕೊಂಡು ನಟಿಸುವ ದೃಶ್ಯದಲ್ಲಿ ಯಾವುದೇ ಆತಂಕವಿಲ್ಲದೆ ಧೈರ್ಯದಿಂದ ಮಾಡಿದ್ದಾರೆ. ಚಿತ್ರತಂಡ ಬೆರಗಾಗಿರುವುದು ಶ್ರೇಯಸ್‍ರ ಈ ಧೈರ್ಯಕ್ಕೆ.
ಚಿತ್ರವನ್ನು ರಾಜಾಹುಲಿ ಖ್ಯಾತಿಯ ಗುರು ದೇಶಪಾಂಡೆ ನಿರ್ದೇಶಿಸುತ್ತಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ ಚಿತ್ರಕ್ಕೆ ಹೊಸ ಹುಡುಗಿಯನ್ನು ನಾಯಕಿಯಾಗಿ ಪರಿಚಯಿಸಲು ಸಿದ್ಧತೆ ನಡೆಸಲಾಗಿದೆ.
Related Articles :-
Promotional Song Shot For 'Padde Huli'