ಸಾಧುಕೋಕಿಲ, ಕನ್ನಡ ಚಿತ್ರರಸಿಕರಿಗೆ ಹೆಚ್ಚಾಗಿ ಗೊತ್ತಿರುವುದು ಹಾಸ್ಯ ನಟನಾಗಿ. ಸಂಗೀತ ನಿರ್ದೇಶಕರಾಗಿರುವ, ಇವತ್ತಿಗೂ ಕನ್ನಡ ಚಿತ್ರರಂಗದ ನಂಬರ್ ಒನ್ ಹಿನ್ನೆಲೆ ಸಂಗೀತ ನಿರ್ದೇಶಕ. ಈ ಸಾಧು ಅದ್ಭುತ ಗಾಯಕರೂ ಹೌದು. ಮೆಲೋಡಿಗೆ ಹೇಳಿ ಮಾಡಿಸಿದಂತಹಾ ಧ್ವನಿ ಇರುವ ಸಾಧು, ಹಾಡುವುದು ಮಾತ್ರ ಅಪರೂಪ.
ಈಗ ಪ್ರೀತಿಯ ರಾಯಭಾರಿ ಚಿತ್ರಕ್ಕೆ ಸಾಧು ಹಾಡಿದ್ದಾರೆ. ಎದೆಗಾರಿಕೆ ಚಿತ್ರದಲ್ಲಿ ಹಾಡಿದ ನಂತರ ಸಾಧು ಹಾಡಿರುವುದು ಈ ಚಿತ್ರಕ್ಕೆ. ದೂರ ದೂರನೇ.. ಎಂದು ಶುರುವಾಗುವ ಹಾಡು, ಸಾಧು ಧ್ವನಿಯಲ್ಲಿ ಇಂಪಾಗಿ ಮೂಡಿ ಬಂದಿದೆ. ಚಿತ್ರದ ಪ್ರಮುಖ ಪಾತ್ರಧಾರಿಗಳಲ್ಲಿ ಕೂಡಾ ಸಾಧು ಒಬ್ಬರು.