` ಚಾರ್‍ಮಿನಾರ್ ಸುಂದರಿಯ ಫೋಟೋ.. ಅಬ್ಬಾ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
meghana goenkar's hot photoshoot
Meghana Goenkar Image

ಮೇಘನಾ ಗಾಂವ್ಕರ್. ಚಾರ್‍ಮಿನಾರ್ ಸುಂದರಿ ಎಂದೇ ಕರೆಸಿಕೊಂಡವರು. ನಮ್ ಏರಿಯಾಲ್ ಒಂದಿನ, ವಿನಾಯಕ ಗೆಳೆಯರ ಬಳಗ, ತುಘ್ಲಕ್, ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ.. ಹೀಗೆ ಅವರು ನಟಿಸಿದ ಚಿತ್ರಗಳಲ್ಲಿ ಹೋಮ್ಲಿಯಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಅಂತಹ ಮೇಘನಾರ ಈ ಫೋಟೋ ಅಭಿಮಾನಿಗಳಿಗೆ ಕಚಗುಳಿಯಿಟ್ಟಿರುವುದು ನಿಜ.

ಇದು ಯಾವುದೇ ಸಿನಿಮಾದ ಫೋಟೋ ಶೂಟ್ ಅಲ್ಲ. ಮೇಕ್‍ಓವರ್‍ಗೆಂದು ಫೋಟೋಶೂಟ್ ಮಾಡಿಸಿದೆ. ಆಗ ಮೇಕಪ್‍ನವರು ಇಂಥಾದ್ದೊಂದು ಹೊಸ ಕಾಸ್ಟ್ಯೂಮ್ ಇದೆ ನೋಡಿ ಎಂದರು. ಇಷ್ಟವಾಯಿತು. ಈಗ ನೋಡಿದರೆ.. ಎಲ್ಲರಿಗೂ ಇಷ್ಟವಾಗಿದೆ ಎಂದು ಹೇಳಿಕೊಂಡಿದ್ದಾರೆ ಮೇಘನಾ.

ಬಹುಶಃ ಮೇಘನಾ ಅವರನ್ನು ಇಷ್ಟೊಂದು ಗ್ಲಾಮರಸ್ ಆಗಿ ನೋಡದೇ ಇದ್ದ ಕಾರಣಕ್ಕೋ ಏನೋ.. ಫೋಟೋ ಆನ್‍ಲೈನ್‍ನಲ್ಲಿ ವೈರಲ್ ಆಗಿಬಿಟ್ಟಿದೆ.

 

 

 

Adachanege Kshamisi Teaser Launch Gallery

Mataash Movie Gallery