` ಪರದೇಸಿಯಾದ ವಿಜಯ್ ರಾಘವೇಂದ್ರ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
paradesi care of london
Vijay Raghavendra's new movie launched

ಚಿನ್ನಾರಿಮುತ್ತನೆಂದೇ ಇವತ್ತಿಗೂ ಅಭಿಮಾನಿಗಳಿಂದ ಕರೆಸಿಕೊಳ್ಳುವ ವಿಜಯ್ ರಾಘವೇಂದ್ರ ಈಗ ಪರದೇಸಿಯಾಗಿದ್ದಾರೆ. ಅಂದರೆ ಬೇರೇನಿಲ್ಲ `ಪರದೇಸಿ ಕೇರಾಫ್ ಲಂಡನ್' ಚಿತ್ರಕ್ಕೆ ವಿಜಯ್ ರಾಘವೇಂದ್ರ ನಾಯಕ. ರಾಜ ಲವ್ಸ್ ರಾಧೆ ಚಿತ್ರತಂಡದಿಂದಲೇ ಈ ಚಿತ್ರವೂ ಶುರುವಾಗಿದೆ. ಬಳ್ಳಾರಿ ಜಿಲ್ಲೆಯ ಬಿ.ಬದರೀ ನಾರಾಯಣ ಚಿತ್ರದ ನಿರ್ಮಾಪಕರಾದರೆ, ಎಂ.ರಾಜಶೇಖರ್ ನಿರ್ದೇಶಕ.

ಚಿತ್ರದ ಮುಹೂರ್ತವಂತೂ ಅದ್ದೂರಿಯಾಗಿಯೇ ನೆರವೇರಿದೆ. ಚಿತ್ರದ ಮುಹೂರ್ತಕ್ಕೆ ಆಗಮಿಸಿದ್ದ ಜನಾರ್ದನ ರೆಡ್ಡಿ, ಚಿತ್ರಕ್ಕೆ ಕ್ಲಾಪ್ ಮಾಡಿದರು. ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಕ್ಯಾಮೆರಾಗೆ ಚಾಲನೆ ನೀಡಿದರು. ವಿಜಯ್ ರಾಘವೇಂದ್ರ ಅವರಿಗೆ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಪೂಜಾ ಹುಣಸೂರು ಮತ್ತು ಸ್ನೇಹಾ.

Padarasa Movie Gallery

Kumari 21 Movie Gallery