` ಹೆಂಗೈತೆ ಟಗರು..? ಶಿವಣ್ಣ ಕೂಡಾ ವೇಯ್ಟಿಂಗ್..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
shivarajkumar eager to watch tagaru
Tagaru Movie Image

ಟಗರು ಚಿತ್ರದ ಬಗ್ಗೆ ಪ್ರೇಕ್ಷಕರು, ಅಭಿಮಾನಿಗಳ ಜೊತೆ ಅಷ್ಟೇ ಕುತೂಹಲದಿಂದ ಕಾಯುತ್ತಿರುವ ಮತ್ತೊಬ್ಬ ವ್ಯಕ್ತಿ ಶಿವರಾಜ್‍ಕುಮಾರ್. ಕಡ್ಡಿಪುಡಿ ನನ್ನ ಚಿತ್ರಜೀವನದಲ್ಲಿಯೇ ಒಂದು ಫೈನೆಸ್ಟ್ ಸಿನಿಮಾ ಎಂದಿರುವ ಶಿವ ರಾಜ್‍ಕುಮಾರ್, ಸೂರಿ ಜೊತೆ ಆಗಲೇ ಮತ್ತೊಮ್ಮೆ ಕೆಲಸ ಮಾಡುವ ಅಭಿಲಾಷೆ ವ್ಯಕ್ತಪಡಿಸಿದ್ದರು. ಅದು ಮತ್ತೊಮ್ಮೆ ಟಗರು ಚಿತ್ರದಲ್ಲಿ ನನಸಾಗಿದೆ.

ಇದು ಕ್ರೈಂ ಚೇಸಿಂಗ್ ಸ್ಟೋರಿ ಎನ್ನುವ ಶಿವಣ್ಣ, ಚಿತ್ರದ ಕಥೆ, ಮೇಕಿಂಗ್ ಪ್ರತಿಯೊಂದು ಕೂಡಾ ವಿಭಿನ್ನ ಫೀಲ್ ಕೊಡುತ್ತೆ. ಚಿತ್ರದ ಸೌಂಡಿಂಗ್ ಕೂಡಾ ಅದ್ಭುತವಾಗಿ ಮೂಡಿಬಂದಿದೆ ಎಂದು ನಿರ್ದೇಶಕ ಚರಣ್‍ರಾಜ್‍ರನ್ನು ಹೊಗಳಿದ್ದಾರೆ. ಸೂರಿ ಜೊತೆ ಕೆಲಸ ಮಾಡುವುದು ಒಂದು ಅದ್ಭುತ ಅನುಭವ. ವಿಭಿನ್ನವಾದ ಸಿನಿಮಾ ಹುಟ್ಟೋದು ವಿಭಿನ್ನ ಜನ ಒಟ್ಟಿಗೇ ಸೇರಿದಾಗ ಮಾತ್ರ. ಅದು ಟಗರುನಲ್ಲಿ ಸಾಧ್ಯವಾಗಿದೆ. ಚಿತ್ರ ನೋಡೋಕೆ ನಾನೂ ಕುತೂಹಲದಿಂದ ಕಾಯತ್ತಿದ್ದೇನೆ ಎಂದು ನಿರೀಕ್ಷೆ ಬಿಚ್ಚಿಟ್ಟಿದ್ದಾರೆ ಶಿವಣ್ಣ.

Padarasa Movie Gallery

Kumari 21 Movie Gallery