` ದಿ ವಿಲನ್ ಆಡಿಯೋಗೆ 1 ಕೋಟಿ, 8 ಲಕ್ಷ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
the villain audio rights sold for 1.08 crores
The Villain Image

ಕನ್ನಡದ ಬಹುನಿರೀಕ್ಷಿತ ಚಿತ್ರ `ದಿ ವಿಲನ್' ಚಿತ್ರದ ಆಡಿಯೋ ರೈಟ್ಸ್ 1 ಕೋಟಿ, 8 ಲಕ್ಷಕ್ಕೆ ಮಾರಾಟವಾಗಿದೆ. ಇದು ಒಂದು ದಾಖಲೆಯೇ. ದಕ್ಷಿಣ ಭಾರತ ಚಿತ್ರರಂಗದಲ್ಲಿ 70 ಲಕ್ಷಕ್ಕೆ ಆಡಿಯೋ ಮಾರಾಟವಾಗುವುದು ಗರಿಷ್ಠ ಸರಾಸರಿ. ಹೀಗಿರುವಾಗ ವಿಲನ್ ಚಿತ್ರಕ್ಕೆ 1 ಕೋಟಿ 8 ಲಕ್ಷ ನೀಡಿದೆ ಆನಂದ್ ಆಡಿಯೋ ಕಂಪೆನಿ.

ಪ್ರೇಮ್ ಅವರ ಚಿತ್ರಗಳಿಂದ ಆನಂದ್ ಆಡಿಯೋಗೆ ಈ ಹಿಂದೆ ಒಳ್ಳೆಯ ಬ್ಯುಸಿನೆಸ್ ಆಗಿದೆ. ಈ ಹಿನ್ನೆಲೆಯಲ್ಲಿ ಈ ಮೊತ್ತಕ್ಕೆ ಆಡಿಯೊ ಖರೀದಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಪ್ರೇಮ್. ಚಿತ್ರದ ಚಿತ್ರೀಕರಣ ಮುಂದಿನ ತಿಂಗಳು ಮುಗಿಯಲಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಆಗಲೇ ಶುರುವಾಗಿವೆ. ಸಿ.ಆರ್. ಮನೋಹರ್ ನಿರ್ಮಾಣದ ಚಿತ್ರ ಶಿವರಾಜ್‍ಕುಮಾರ್ & ಸುದೀಪ್ ಕಾಂಬಿನೇಷನ್‍ನಿಂದಾಗಿಯೇ ಭಾರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ.

Padarasa Movie Gallery

Kumari 21 Movie Gallery