ಮಿಸ್ಟರ್ & ಮಿಸಸ್ ರಾಮಾಚಾರಿ, ರಾಜಕುಮಾರದಂತಹ ಎರಡು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕ ಸಂತೋಷ್ ಆನಂದ್‍ರಾಮ್, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ವರ್ಷವಷ್ಟೇ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದ ಆನಂದ್‍ರಾಮ್, ಸುರಭಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ವಿವಾಹ ಸಮಾರಂಭಕ್ಕೆ, ಡಾ.ರಾಜ್ ಫ್ಯಾಮಿಲಿಯ ಎಲ್ಲ ಸದಸ್ಯರೂ ಭಾಗಿಯಾಗಿ ಹರಿಸಿದ್ದು ವಿಶೇಷವಾಗಿತ್ತು. ಅಂಬರೀಷ್, ಸುಮಲತಾ, ತಾರಾ, ರಶ್ಮಿಕಾ ಮಂದಣ್ಣ, ಶ್ರೀಮುರಳಿ, ಗುರುಕಿರಣ್, ಶರತ್ ಕುಮಾರ್, ತಾರಾ.. ಸೇರಿದಂತೆ ಬಹುತೇಕ ಇಡೀ ಚಿತ್ರರಂಗ ಆಗಮಿಸಿ ಶುಭ ಹಾರೈಸಿತು.