ಉಪೇಂದ್ರ ಚಿತ್ರದಲ್ಲಿ ಮಾರಿಮುತ್ತು ಪಾತ್ರದ ಮೂಲಕ ಗಮನ ಸೆಳೆದ ಸರೋಜಮ್ಮ, ರೌಡಿ ಪಾತ್ರಕ್ಕೆ ಅದೆಷ್ಟರಮಟ್ಟಿಗೆ ಜೀವ ತುಂಬಿದ್ದರೆಂದರೆ, ರಿಯಲ್ ಆಗಿ ನೋಡಿದವರೆಲ್ಲ ಅವರನ್ನು ರೌಡಿ ಎಂದುಕೊಂಡೇ ಹೆದರುತ್ತಿದ್ದರು. ಆದರೆ, ಸರೋಜಮ್ಮ ವಾಸ್ತವದಲ್ಲಿ ಸರ್ಕಾರಿ ನೌಕರರಾಗಿದ್ದವರು. ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದ ಸರ್ಕಾರಿ ಉದ್ಯೋಗಿ. ಅದಾದ ನಂತರ ಸರೋಜಮ್ಮ ಹಲವು ಚಿತ್ರಗಳಲ್ಲಿ ರೌಡಿ ಪಾತ್ರಗಳಲ್ಲಿಯೇ ಮಿಂಚಿದರು. ಈಗ ಅವರ ಮೊಮ್ಮಗಳು ಚಿತ್ರರಂಗಕ್ಕೆ ಬರುತ್ತಿದ್ದಾರೆ.
ಸರೋಜಮ್ಮ ಅವರ ಮೊಮ್ಮಗಳು ಜಯಶ್ರೀ ಆರಾಧ್ಯ, ಪುಟ್ಟರಾಜ್ ಲವರ್ ಆಫ್ ಶಕೀಲ ಚಿತ್ರಕ್ಕೆ ನಾಯಕಿ. ಅದು ಖೋಖೋ ಆಟವನ್ನು ಆಧರಿಸಿದ, ತುಮಕೂರಿನಲ್ಲಿ ನಡೆದಿದ್ದ ಸತ್ಯಘಟನೆ ಆಧರಿಸಿದ ಚಿತ್ರ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಒಬ್ಬರು ಜಯಶ್ರೀ ಆರಾಧ್ಯ.