ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರಕ್ಕೆ ಖಳನಾಯಕರಾಗಿ ಅನೂಪ್ ಸಿಂಗ್ ಠಾಕೂರ್ ಬರುತ್ತಿದ್ದಾರೆ. ಅನೂಪ್ ಸಿಂಗ್ ಠಾಕೂರ್ ಕೇವಲ ನಟರಲ್ಲ. ಬಾಡಿಬಿಲ್ಡಿಂಗ್‍ನಲ್ಲಿ ಅಂತಾರಾಷ್ಟ್ರೀಯ ಕೂಟಗಳಲ್ಲಿ ಪ್ರಶಸ್ತಿ ಗೆದ್ದಿರುವ ಕ್ರೀಡಾಪಟು. 2015ರಲ್ಲಿ ಮಿ.ಇಂಡಿಯಾ ಪ್ರಶಸ್ತಿ ಪಡೆದಿದ್ದವರು. ಈಗ ದರ್ಶನ್ ಚಿತ್ರಕ್ಕೆ ವಿಲನ್.
ಈ ಚಿತ್ರದಲ್ಲಿ ದರ್ಶನ್ ಎದುರು ಮೂವರು ಖಳನಾಯಕರಿದ್ದಾರೆ. ಹೀರೋ ಧನಂಜಯ್, ಅಭಿನವ ವಜ್ರಮುನಿ ರವಿಶಂಕರ್ ಜೊತೆ ಈಗ ಅನೂಪ್ ಸಿಂಗ್ ಠಾಕೂರ್ ಸೇರ್ಪಡೆಯಾಗಿದ್ದಾರೆ.
ಕನ್ನಡದಲ್ಲಿ ಈ ಹಿಂದೆ ರೋಗ್ ಚಿತ್ರದಲ್ಲಿ ಸೈಕೋ ಪಾತ್ರದಲ್ಲಿ ಗಮನ ಸೆಳೆದಿದ್ದ ಅನೂಪ್ ಸಿಂಗ್ ಠಾಕೂರ್, ಸಿಂಗಂ 3 ಚಿತ್ರದಲ್ಲಿ ಸೂರ್ಯ ಎದುರು ಖಳನಾಗಿ ಅಬ್ಬರಿಸಿದ್ದವರು. ರಾಮಾಯಣ ಧಾರಾವಾಹಿಯಲ್ಲಿ ಹನುಮಂತನ ಪಾತ್ರದಲ್ಲಿ ಮಿಂಚಿದ್ದ ಅನೂಪ್ ಸಿಂಗ್ ಠಾಕೂರ್, ದರ್ಶನ್ ಎದುರು ನಟಿಸುತ್ತಿರುವುದಕ್ಕೆ ಥ್ರಿಲ್ಲಾಗಿದ್ದಾರೆ.