` ಸಾ.ರಾ.ಗೋವಿಂದು ಪುತ್ರನ ಕಲ್ಯಾಣೋತ್ಸವ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
anup sa ra govindu son's kalyanotsava
Meghana, Anup Sa Ra Govindu Marriage

ಅನೂಪ್ ಸಾ.ರಾ.ಗೋವಿಂದು ಮತ್ತು ಮೇಘನಾ ಅವರ ಮದುವೆ. ಹೇಳಿಕೇಳಿ ಸಾ.ರಾ.ಗೋವಿಂದು ಪುತ್ರನ ಮದುವೆ. ಹೀಗಾಗಿಯೇ ಇಡೀ ಚಿತ್ರರಂಗ ಅನೂಪ್, ಮೇಘನಾ ಅವರ ಮದುವೆಗೆ ಆಗಮಿಸಿ ಶುಭಕೋರಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ, ಎಲ್ಲ ಪಕ್ಷಗಳ ರಾಜಕಾರಣಿಗಳೂ, ಕನ್ನಡ ಚಿತ್ರರಂಗದ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ದಕ್ಷಿಣ ಭಾರತ ಚಿತ್ರರಂಗದ ಹಲವು ತಂತ್ರಜ್ಞರು.. ನವವಧುವರರಿಗೆ ಶುಭ ಕೋರಿದರು.

ಆರತಕ್ಷತೆಗೆ ಅದ್ದೂರಿಯಾಗಿ ಸೆಟ್ ಹಾಕಲಾಗಿತ್ತು. ಮೇಘನಾ ಅವರ ಆಸೆಯಂತೆಯೇ ಆರತಕ್ಷತೆಯ ಸೆಟ್ ಹಾಕಲಾಗಿತ್ತು. ಬಾಲ್ಯದ ಗೆಳೆಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಘಳಿಗೆಯಲ್ಲಿ ಡಾ.ರಾಜ್ ರಸಸಂಜೆಯ ಗೀತೆಗಳು ನವದಂಪತಿಗೆ ಶುಭ ಹಾರೈಸಿದವು.

ಸೋಮವಾರ ಬೆಳಗ್ಗೆ 9.45ರಿಂದ 10.15ರ ಮೇಷ ಲಗ್ನದ ಶುಭ ಮುಹೂರ್ತದಲ್ಲಿ ಅನೂಪ್ ಹಾಗೂ ಮೇಘನಾ ಸಪ್ತಪದಿ ತುಳಿದಿದ್ದಾರೆ. ಹೊಸ ಬಾಳಿಗೆ ಕಾಲಿಟ್ಟ ಹೊಸ ಜೋಡಿಗೆ ಶುಭವಾಗಲಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery