`ಪ್ರೇಮ ಬರಹ' ಅರ್ಜುನ್ ಸರ್ಜಾ ಪುತ್ರ ಐಶ್ವರ್ಯಾ ಅಭಿನಯದ ಮೊದಲ ಚಿತ್ರ. ಚಂದನ್ ನಾಯಕರಾಗಿರುವ ಈ ಚಿತ್ರಕ್ಕೆ ಅರ್ಜುನ್ ಸರ್ಜಾ ನಿರ್ದೇಶಕ. ಸಿನಿಮಾ ನೋಡಿದ ಪ್ರೇಕ್ಷಕರು, ಚಿತ್ರಕ್ಕೆ ಫುಲ್ ಮಾಕ್ರ್ಸ್ ಕೊಟ್ಟಿದ್ದಾರೆ. ಒಬ್ಬೊಬ್ಬರ ವಿಮರ್ಶೆ ಒಂದೊಂದ್ ಥರಾ. `ಪ್ರೇಮ ಬರಹ' ಸಿನಿಮಾವನ್ನು ನೋಡಿದ ಕಿಚ್ಚ ಸುದೀಪ್ ಕೂಡಾ ಚಿತ್ರವನ್ನು ಮನಸಾರೆ ಮೆಚ್ಚಿದ್ದಾರೆ.
ಪ್ರೇಮಬರಹ ಚಿತ್ರದಲ್ಲಿ ಜೀವನ ಮತ್ತು ಪ್ರೀತಿಯನ್ನು ಅದ್ಭುತವಾಗಿ ಸೆರೆಹಿಡಿಯಲಾಗಿದೆ. ಎರಡನ್ನೂ ಒಂದಕ್ಕೊಂದು ಬೆಸೆದಿರುವುದು ಎಂಥವರಿಗೂ ಇಷ್ಟವಾಗುತ್ತೆ. ಇಬ್ಬರು ಪ್ರೇಮಿಗಳು ಮತ್ತು ಸೈನಿಕರ ಹೋರಾಟದ ಬದುಕನ್ನು ಪ್ರೇಮಕಥೆಯೊಂದಿಗೆ ಬೆಸುಗೆ ಹಾಕುವ ಸವಾಲು ಇಷ್ಟವಾಗುತ್ತೆ.
ಐಶ್ವರ್ಯಾ ಸರ್ಜಾ, ತಮ್ಮ ಪ್ರತಿಭೆಯಿಂದಲೇ ಬೆರಗು ಮೂಡಿಸುತ್ತಾರೆ. ಚಂದನ್ ಕೂಡಾ ಇಷ್ಟವಾಗುತ್ತಾರೆ. ಚಿತ್ರದಲ್ಲಿ ವ್ಹಾವ್ ಎನ್ನಿಸುವಂತ ದೃಶ್ಯಗಳಿವೆ. ಒಟ್ಟಾರೆ ಸಿನಿಮಾ ವಂಡರ್‍ಫುಲ್.
ಇದು ಸುದೀಪ್ ನೀಡಿರುವ ಚಿತ್ರದ ವಿಮರ್ಶೆ. ಪ್ರೇಮಬರಹಕ್ಕೆ ಈಗಾಗಲೇ ಪ್ರೇಕ್ಷಕರ ಆಶೀರ್ವಾದ ಸಿಕ್ಕಿದೆ. ಥಿಯೇಟರುಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಚಿತ್ರ, ಉತ್ತಮ ಗಳಿಕೆಯನ್ನೂ ಮಾಡುತ್ತಿದೆ.