ವಿಭಿನ್ನ ಸಿನಿಮಾಗಳ ಮೂಲಕವೇ ಸ್ಟಾರ್ ಆದ ರಕ್ಷಿತ್ ಶೆಟ್ಟಿ, ಈಗ ಚಾರ್ಲಿ 777 ಆಗುತ್ತಿದ್ದಾರೆ. ಚಿತ್ರಕ್ಕೆ ಮೊದಲು ಅರವಿಂದ್ ಅಯ್ಯರ್ ಹೀರೋ ಎನ್ನಲಾಗಿತ್ತು. ಆದರೆ, ಈಗ ಚಿತ್ರತಂಡ ರಕ್ಷಿತ್ ಶೆಟ್ಟಿ ಅವರನ್ನೇ ನಾಯಕರನ್ನಾಗಿ ಆಯ್ಕೆ ಮಾಡಿಕೊಂಡಿದೆ. ಅರವಿಂದ್ ಅಯ್ಯರ್ ಬದಲಾವಣೆಗೆ ಕಾರಣ, ಅವರ ಹಳೆಯ ಕಮಿಟ್‍ಮೆಂಟ್ಸ್ ಅಷ್ಟೇ ಹೊರತು, ಬೇರೇನೂ ಇಲ್ಲ ಎಂದಿದೆ ಚಿತ್ರತಂಡ.
ಈಗಾಗಲೇ ಹಲವು ಚಿತ್ರಗಳಿಗೆ ಕಮಿಟ್ ಆಗಿರುವ ಅರವಿಂದ್ ಅಯ್ಯರ್, ಚಾರ್ಲಿ 777 ಚಿತ್ರಕ್ಕೆ ಡೇಟ್ ಹೊಂದಿಸಲು ಸಾಧ್ಯವಾಗಿಲ್ಲ. ಅಂದಹಾಗೆ ಅರವಿಂದ್ ಅಯ್ಯರ್ ಕೂಡಾ ರಕ್ಷಿತ್ ಶೆಟ್ಟಿ ಗ್ಯಾಂಗ್‍ನ ಸದಸ್ಯರೇ. ಅವರದ್ದೇ ಬ್ಯಾನರ್‍ನ ಭೀಮಸೇನ ನಳಮಹರಾಜ ಚಿತ್ರಕ್ಕೆ ಅರವಿಂದ್ ಅಯ್ಯರ್ ಅವರೇ ನಾಯಕ.
ಪ್ರಾಣಿ ಮತ್ತು ಮನುಷ್ಯನ ನಡುವಿನ ಬಾಂಧವ್ಯದ ಕುರಿತ ಕಥೆ ಹೊಂದಿರುವ ಚಿತ್ರ, ವಿಭಿನ್ನ ಕಥಾ ಹಂದರ ಹೊಂದಿದೆ ಎಂದಿದ್ದಾರೆ ರಕ್ಷಿತ್ ಶೆಟ್ಟಿ. ಅವನೇ ಶ್ರೀಮನ್ನಾರಾಯಣ ಹಾಗೂ ಚಾರ್ಲಿ 777.. ಎರಡೂ ಚಿತ್ರಗಳಿಗೆ ರಕ್ಷಿತ್ ಶೆಟ್ಟಿ ಅವರೇ ನಾಯಕರಾಗಿದ್ದಾರೆ.