`ದಿ ವಿಲನ್' ಶಿವರಾಜ್ ಕುಮಾರ್, ಸುದೀಪ್ & ಜೋಗಿ ಪ್ರೇಮ್ ಕಾಂಬಿನೇಷನ್‍ನ ಚಿತ್ರ. ಸಿ.ಆರ್.ಮನೋಹರ್ ನಿರ್ಮಾಣದ ಈ ಬಹುಕೋಟಿ ವೆಚ್ಚದ ಚಿತ್ರ, ಕನ್ನಡ ಚಿತ್ರರಂಗದಲ್ಲೇ ನಭೂತೋ ನಭವಿಷ್ಯತಿ ಎಂಬಂತೆ ಕ್ರೇಜ್ ಸೃಷ್ಟಿಸಿರುವ ಚಿತ್ರ. ಚಿತ್ರದ ಮೇಲೆ ಕನ್ನಡಿಗರು ವಿಶೇಷ ಪ್ರೀತಿ ಬೆಳೆಸಿಕೊಂಡಿದ್ದರೆ, ಚಿತ್ರದ ನಾಯಕಿ ಆ್ಯಮಿ ಜಾಕ್ಸನ್ ಇನ್ನೊಂದು ಕಡೆ ರಿಯಲ್ಲಾಗಿಯೇ ಲವ್ವಲ್ಲಿ ಬಿದ್ದಿದ್ದಾರೆ.
ಬ್ರಿಟನ್ ಮೂಲದ ಉದ್ಯಮಿ ಜಾರ್ಜ್ ಪ್ಯಾನಾಯ್ಟೊವ್ ಎಂಬುವವರ ಜೊತೆ ಲವ್ವಾಗಿದೆ. ಈ ಜಾರ್ಜ್ ಪ್ಯಾನಾಯ್ಟೊವ್ ಬ್ರಿಟನ್‍ನಲ್ಲಿ ಹಲವು ಸ್ಟಾರ್ ಹೋಟೆಲ್‍ಗಳನ್ನು ಹೊಂದಿರುವ ಉದ್ಯಮಿಯೊಬ್ಬರ ಪುತ್ರ. 2015ರಲ್ಲಿ ಪರಸ್ಪರ ಭೇಟಿಯಾಗಿದ್ದ ಇಬ್ಬರಿಗೂ, ಈಗ ಪ್ರೀತಿ ಶುರುವಾಗಿದೆ. ವ್ಯಾಲೆಂಟೈನ್ ಡೇಯನ್ನು ಅದ್ಧೂರಿಯಾಗಿ ಆಚರಿಸಿಕೊಂಡಿರುವ ಜೋಡಿ, ದೇಶ ವಿದೇಶಗಳಲ್ಲಿ ಪ್ರಣಯ ಪಕ್ಷಿಗಳಂತೆ ಹಾರಾಡುತ್ತಿವೆ. ಇದನ್ನೆಲ್ಲ ಸ್ವತಃ ಆ್ಯಮಿ ಜಾಕ್ಸನ್ ಅವರೇ ಬಹಿರಂಗಪಡಿಸಿರುವುದು ವಿಶೇಷ.