ಚರಣ್ ರಾಜ್, ಕನ್ನಡದವರೇ. ಸ್ಟಾರ್ ಆಗಿ ಬೆಳೆದಿದ್ದು ತಮಿಳು ಚಿತ್ರರಂಗದಲ್ಲಿ. ಇವರು ಇತ್ತೀಚೆಗೆ ಡಾ.ರಾಜ್ ಸಮಾಧಿಗೆ ಭೇಟಿ ಕೊಟ್ಟಿದ್ದರು. ಪಾರ್ವತಮ್ಮ ರಾಜ್‍ಕುಮಾರ್ ನಿಧನರಾದ ವೇಳೆ ಚರಣ್‍ರಾಜ್ ಬೆಂಗಳೂರಿನಲ್ಲಿ ಇರಲಿಲ್ಲ. ಅದಾದ ಮೇಲೆ ಬರಲೂ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಚರಣ್‍ರಾಜ್, ಇತ್ತೀಚೆಗೆ ಡಾ.ರಾಜ್ ಸಮಾಧಿ ಹಾಗೂ ಪಾರ್ವತಮ್ಮ ರಾಜ್‍ಕುಮಾರ್ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.
ಇನ್ನು ಕಾಕತಾಳೀಯವೋ ಎಂಬಂತೆ ಪುನೀತ್ ರಾಜ್‍ಕುಮಾರ್ ಕೂಡಾ ಅಲ್ಲಿಗೆ ಬಂದಿದ್ದಾರೆ. ಪುನೀತ್ ರಾಜ್‍ಕುಮಾರ್ ಆಗಾಗ್ಗೆ ದಿಢೀರನೆ ಸಮಾಧಿಗೆ ಭೇಟಿ ಕೊಡುವುದು ಹೊಸದೇನೂ ಅಲ್ಲ. ಅಲ್ಲಿಯೇ ಚರಣ್‍ರಾಜ್ ಅವರನ್ನು ಭೇಟಿ ಮಾಡಿದ ಪುನೀತ್, ನಿಮ್ಮ ಜೊತೆ ಸಿನಿಮಾ ಮಾಡಲು ಕಾಲ ಕೂಡಿ ಬರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ದೊಡ್ಡಮನೆ ಸಿನಿಮಾ ಮಾಡೋದಕ್ಕಿಂತ ಭಾಗ್ಯ ಇನ್ನೇನಿದೆ. ಶಿವಣ್ಣನ ಜೊತೆ ಈಗಾಗಲೇ ಸಿನಿಮಾ ಮಾಡಿದ್ದೇನೆ. ನೀವು ಯಾವಾಗ ಕರೆದರೂ ನಾನು ರೆಡಿ ಎಂದರಂತೆ ಚರಣ್‍ರಾಜ್. ಬೇಗನೆ ಒಟ್ಟಿಗೇ ಸಿನಿಮಾ ಮಾಡೋ ಕಾಲ ಹತ್ತಿರದಲ್ಲಿದೆ ಎಂದರಂತೆ ಪುನೀತ್. ಅಭಿಮಾನಿಗಳು ಕಾಯುತ್ತಿದ್ದಾರೆ.