ಕಾಮಿಡಿ ಕಿಲಾಡಿಗಳು ಮೂಲಕ ಬೆಳಕಿಗೆ ಬಂದ ಪ್ರತಿಭೆ ನಯನಾ. ರಿಯಾಲಿಟಿ ಶೋನಲ್ಲಂತೂ ನಯನಾ ಅವರನ್ನು ಜ್ಯೂ.ಉಮಾಶ್ರೀ ಎಂದೇ ಕರೆಯಲಾಗುತ್ತಿತ್ತು. ಅಂತಹ ನಯನಾಗೆ ಈಗ ಚಿತ್ರರಂಗದಲ್ಲಿ ಕೈತುಂಬಾ ಅವಕಾಶಗಳಿವೆ.
ಈಗಾಗಲೇ ಪುನೀತ್ ರಾಜ್ಕುಮಾರ್ ಬ್ಯಾನರ್ನಲ್ಲಿ, ಹಲವು ಸ್ಟಾರ್ ಚಿತ್ರಗಳಲ್ಲಿ ನಟಿಸುತ್ತಿರುವ ನಯನಾಗೆ ಈಗ ದರ್ಶನ್ ಚಿತ್ರದಲ್ಲೂ ಚಾನ್ಸ್ ಸಿಕ್ಕಿದೆ.
ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿ ನಯನಾ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಪಿ.ಕುಮಾರ್ ನಿರ್ದೇಶನದ, ಶೈಲಜಾ ನಾಗ್ ನಿರ್ಮಾಣದ ಚಿತ್ರದ ಶೂಟಿಂಗ್ ಕೆಲವೇ ದಿನಗಳಲ್ಲಿ ಶುರುವಾಗಲಿದೆ.