18 ವರ್ಷಗಳ ಹಿಂದೆ, ವಿಷ್ಣುವರ್ಧನ್ ಅಭಿನಯದ ಯಜಮಾನ ಚಿತ್ರ ತೆರೆಕಂಡಿತ್ತು. ವಿಷ್ಣು ದ್ವಿಪಾತ್ರದಲ್ಲಿ ನಟಿಸಿದ್ದ ಚಿತ್ರದಲ್ಲಿ ಪ್ರೇಮಾ, ಶಶಿಕುಮಾರ್, ಅಭಿಜಿತ್.. ಮೊದಲಾದವರು ನಟಿಸಿದ್ದರು. ಸೋದರ ಬಾಂಧವ್ಯದ ಆ ಚಿತ್ರ ಬಾಕ್ಶಾಫೀಸ್‍ನಲ್ಲಿ ಇತಿಹಾಸವನ್ನೇ ಸೃಷ್ಟಿಸಿತ್ತು. ಅದಾದ ನಂತರ ಅದೇ ಹೆಸರಿನ ಚಿತ್ರವೊಂದು ಸೆಟ್ಟೇರುತ್ತಿದೆ. ಹೊಸ ಯಜಮಾನನಾಗುತ್ತಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್.
ದರ್ಶನ್ ಅಭಿನಯದ 51ನೇ ಚಿತ್ರಕ್ಕೆ ನಿರ್ಮಾಪಕರಾದ ಬಿ.ಸುರೇಶ್ ಮತ್ತು ಶೈಲಜಾ ನಾಗ್ ಯಜಮಾನ ಟೈಟಲ್‍ನ್ನು ಅಂತಿಮಗೊಳಿಸಿದ್ದಾರೆ. ಕುಮಾರ್ ನಿರ್ದೇಶನದ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಮುಹೂರ್ತ ಸರಳವಾಗಿ ನೆರವೇರಿತ್ತು. ಚಿತ್ರದ ಫಸ್ಟ್ ಲುಕ್, ದರ್ಶನ್ ಹುಟ್ಟುಹಬ್ಬದ ದಿನ ಬಿಡುಗಡೆಯಾಗಲಿದೆ. ದರ್ಶನ್‍ರ ಯಜಮಾನ ಚಿತ್ರ ಕೂಡಾ, ವಿಷ್ಣು ಯಜಮಾನನಂತೆಯೇ ದಾಖಲೆ ಸೃಷ್ಟಿಸಲಿ ಎನ್ನುವುದು ಅಭಿಮಾನಿಗಳ ಹಾರೈಕೆ.
Related Articles :-
Darshan's 51st Film Titled 'Yajamana'
Darshan's 51st Film From Feb 19th