` ಸ್ಟಾರ್ ಪಟ್ಟ ಕೊಡಿಸಿದ ಗೆಳೆಯನನ್ನೇ ಮರೆತರಾ ಚಂದನ್ ಶೆಟ್ಟಿ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
who is the composer of 3 peg song
Chandan Shetty Image

ಚಂದನ್ ಶೆಟ್ಟಿ, ಈಗ ಬಿಗ್‍ಬಾಸ್ ವಿನ್ನರ್ ಆಗಿ ಫೇಮಸ್. ಅದಕ್ಕೂ ಮುನ್ನ ಅವರು ಮೂರೇ ಮೂರು ಪೆಗ್ಗಿಗೆ ತಲೆ ಗಿರ ಗಿರ ಗಿರ ಹಾಡಿನಿಂದ ಫೇಮಸ್. ಆ ಹಾಡಿನ ನಂತರವೇ ಅಭಿಮಾನಿಗಳನ್ನು ಸೃಷ್ಟಿಸಿಕೊಂಡ ಚಂದನ್ ಶೆಟ್ಟಿ, ಆ ಹಾದಿಯಲ್ಲಿ ತನ್ನನ್ನು ಸ್ಟಾರ್ ಪಟ್ಟಕ್ಕೇರಿಸಲು ಕಾರಣರಾದವರನ್ನೇ ಮರೆತರಾ..? ಅಂಥಾದ್ದೊಂದು ಆರೋಪ ಬಂದಿರೋದು ವಿಜೇತ್ ಶೆಟ್ಟಿ ಅವರಿಂದ.

ಮೂರೇ ಮೂರು ಪೆಗ್ಗಿಗೆ ಹಾಡಿನ ಮ್ಯೂಸಿಕ್ ಕಂಪೋಸ್ ಮಾಡಿದ್ದು ಸಂಗೀತ ನಿರ್ದೇಶಕ ವಿಜೇತ್ ಶೆಟ್ಟಿ. ಗೆಳೆತನಕ್ಕಾಗಿ ಯಾವುದೇ ಅಗ್ರಿಮೆಂಟ್‍ಗಳಿಲ್ಲದೆ ಮಾಡಿದ ಹಾಡು ಅದು. ಆದರೆ, ಹಾಡು ಹಿಟ್ ಆದ ಮೇಲೆ, ಖ್ಯಾತಿ, ಹಣ ಸಿಕ್ಕ ಮೇಲೆ ಚಂದನ್ ಶೆಟ್ಟಿ, ವಿಜೇತ್ ಶೆಟ್ಟಿ ಅವರನ್ನು ಮರೆತೇಬಿಟ್ಟಿದ್ದಾರಂತೆ. ಹಾಡಿನಿಂದ ಏನೇ ಲಾಭ ಬಂದರೂ ಸಮಾನವಾಗಿ ಹಂಚಿಕೊಳ್ಳೋಣ ಎಂದು ಒಪ್ಪಂದವಾಗಿತ್ತು. ಆದರೆ, ಗೆಳೆತನದ ಮಧ್ಯೆ ಮಾತುಕತೆಯನ್ನಷ್ಟೇ ನಂಬಿದ್ದೆವು. ಪತ್ರಗಳಿಲ್ಲ. ಈಗ ಚಂದನ್ ಶೆಟ್ಟಿ, ಫೋನ್‍ಗೂ ಸಿಕ್ಕಲ್ಲ ಎಂದಿದ್ದಾರೆ ವಿಜೇತ್ ಶೆಟ್ಟಿ.

ಈ ವಿಜೇತ್ ಶೆಟ್ಟಿ, ಅರ್ಜುನ್ ಸರ್ಜಾ ಕುಟುಂಬಕ್ಕೆ ಸೇರಿದವರು. ಏಕೋ ಏನೋ, ತೆರೆಯ ಮೇಲೆ ಕಂಡವರಷ್ಠೇ ಹೀರೋ ಆಗುತ್ತಾರೆ. ಹಾಡನ್ನು ಸೃಷ್ಟಿಸಿದವರ ಹೆಸರು ಹಾಕುವ ಸೌಜನ್ಯವನ್ನೂ ತೋರಿಸಲ್ಲ ಅನ್ನೋದು ವಿಜೇತ್ ಶೆಟ್ಟಿ ಅವರ ದೂರು. 

Shivarjun Movie Gallery

KFCC 75Years Celebrations and Logo Launch Gallery