` ಪ್ರೇಮಿಗಳ ದಿನ ಸ್ಪೆಷಲ್ - ಅಮ್ಮನಿಗೆ ಪ್ರಥಮ್ ಉಡುಗೊರೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
pratham's valentines day gift to his mom
Pratham with his mother

ಪ್ರೇಮಿಗಳ ದಿನದಂದು ಪ್ರೇಯಸಿಗೆ, ಪತ್ನಿಗೆ ಉಡುಗೊರೆ ಕೊಡುವುದು, ಐ ಲವ್ ಯೂ ಹೇಳೋದು ಮಾಮೂಲು. ವ್ಯಾಲೆಂಟೈನ್ ಡೇ ಎಂದರೆ ಇಷ್ಟೇ ಎಂದಾಗಿಬಿಟ್ಟಿದೆ. ಆದರೆ, ಒಳ್ಳೆ ಹುಡುಗ ಪ್ರಥಮ್, ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಿದ್ದಾರೆ. ತಮ್ಮ ಪ್ರೀತಿಯ ತಾಯಿಗೊಂದು ಪುಟ್ಟ ಮೊಬೈಲ್ ಉಡುಗೊರೆ ನೀಡಿ, ಪ್ರೇಮಿಗಳ ದಿನವನ್ನ ಸೆಲಬ್ರೇಟ್ ಮಾಡಿದ್ದಾರೆ.

ಸುಮ್ಮನೆ ಹುಡುಗಿಯರಿಗೆ ವ್ಯಾಲೆಂಟೈನ್ ಗಿಫ್ಟ್ ಎಂದು ಖರ್ಚು ಮಾಡುವ ಬದಲು, ತಾಯಿಗೊಂದು ಒಳ್ಳೆಯ ಸೀರೆ ಕೊಡಿಸಿ. ಪ್ರೇಮಿಗಳ ದಿನವನ್ನ ಈ ರೀತಿ ಸೆಲಬ್ರೇಟ್ ಮಾಡಿ ಅನ್ನೋದು ಅಭಿಮಾನಿಗಳಿಗೆ ಪ್ರಥಮ್ ನೀಡಿರುವ ಸಂದೇಶ. ಪ್ರೀತಿಯನ್ನು ಒಂದೇ ದಿನಕ್ಕೆ ಮೀಸಲು ಮಾಡಬೇಡಿ ಎಂದು ಕೂಡಾ ಪ್ರಥಮ್ ಹೇಳಿದ್ದಾರೆ.

I Love You Movie Gallery

Rightbanner02_butterfly_inside

Paddehuli Movie Gallery