` ದರ್ಶನ್‍ಗೆ ಧನಂಜಯ್ ಚಾಲೆಂಜ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
dhananjay challenges darshan
Darshan, Dhananjay Image

ಧನಂಜಯ್, ಅಭಿಮಾನಿಗಳ ಪಾಲಿನ ಧನೂ ಬಾಸ್. ಹಲವು ಚಿತ್ರಗಳಲ್ಲಿ ಹೀರೋ ಆಗಿ ಮಿಂಚಿರುವ ಧನಂಜಯ್, ದರ್ಶನ್ ಚಿತ್ರದಲ್ಲಿ ಮತ್ತೊಮ್ಮೆ ವಿಲನ್ ರೋಲ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮೊದಲು ಯಾವಾಗ ನಟಿಸಿದ್ದರು ಅಂತೀರಾ. ಅದು ಟಗರು ಚಿತ್ರದಲ್ಲಿ. ಶಿವರಾಜ್ ಕುಮಾರ್ ಎದುರು ನೆಗೆಟಿವ್ ಶೇಡ್‍ನಲ್ಲಿ ಕಾಣಿಸಿಕೊಂಡಿರುವ ಧನಂಜಯ್, ಆ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಮಯದಲ್ಲೇ ದರ್ಶನ್ ಅವರ 51ನೇ ಚಿತ್ರದಲ್ಲಿ ವಿಲನ್ ಆಗಲು ರೆಡಿಯಾಗಿದ್ದಾರೆ.

ಹೀರೋ ಆಗಿ ನಟಿಸಿದ್ದೇನೆ. ಜನ ನನ್ನ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ಹೀರೋ ಆಗಿ ಮಾಡುತ್ತಲೇ, ವಿಲನ್ ರೋಲ್ ಮಾಡೋಕೂ ನಾನು ರೆಡಿ ಎಂದಿದ್ದಾರೆ ಧನಂಜಯ್. 

ಶಿವರಾಜ್ ಕುಮಾರ್ ಎದುರು ನಟಿಸಲು ಸಿಕ್ಕ ಅವಕಾಶವನ್ನು ಯಾರಾದರೂ ಮಿಸ್ ಮಾಡಿಕೊಳ್ತಾರಾ..? ಟಗರು ಚಿತ್ರದಲ್ಲಿನ ಡಾಲಿ ಪಾತ್ರ ನನಗೆ ಬೇರೆಯದ್ದೇ ಇಮೇಜ್ ಕೊಡಲಿದೆ. ಇನ್ನು ದರ್ಶನ್ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಕೇಳಿದ್ದೇ ತಡ, ಅವರ ತಂದೆ ಫೋನ್ ಮಾಡಿ ಅಭಿನಂದಿಸಿದರಂತೆ. 

ಖಳನಾಯಕನ ಪಾತ್ರ ಮಾಡೋಕೆ ಸ್ಫೂರ್ತಿ ಇನ್ನೇನೂ ಅಲ್ಲ, ಜಲೀಲನ ಪಾತ್ರ. ಅಂಬರೀಷ್ ಹೀರೋ ಆಗಿ ಎಷ್ಟೇ ಚಿತ್ರಗಳಲ್ಲಿ ನಟಿಸಿದ್ದರೂ, ಜನ ಅವರನ್ನು ಜಲೀಲ ಎಂದೇ ಗುರುತಿಸುತ್ತಾರೆ. ಅದು ಪಾತ್ರಕ್ಕಿರುವ ಶಕ್ತಿ ಅಂಥಾರೆ ಧನಂಜಯ್. ಇನ್ನೂ ಚಿತ್ರದ ಟೈಟಲ್ ಕೂಡಾ ಬಿಡುಗಡೆ ಮಾಡದ ಚಿತ್ರತಂಡ, ದರ್ಶನ್ ಅವರ ಹುಟ್ಟುಹಬ್ಬದ ದಿನ ಎಲ್ಲವನ್ನೂ ಬಹಿರಂಗಪಡಿಸುವ ಸೂಚನೆ ಕೊಟ್ಟಿದೆ. ವೇಯ್ಟಿಂಗ್.

Adachanege Kshamisi Teaser Launch Gallery

Mataash Movie Gallery