ತಿಥಿ ಚಿತ್ರದ ಮೂಲಕ ಏಕಾಏಕಿ ಸ್ಟಾರ್ ಆದವರು ಗಡ್ಡಪ್ಪ. ಅವರ ವೊರಿಜಿನಲ್ ಹೆಸರು ಚನ್ನೇಗೌಡ. ಈ ಗಡ್ಡಪ್ಪ ಖ್ಯಾತಿಯಿಂದಾಗಿ ಅವರ ಮೂಲ ಹೆಸರೇ ಮರೆತುಹೋಗಿದೆ. ಈಗ ಅವರಿಗೆ ಫುಲ್ ಡಿಮ್ಯಾಂಡ್ ಶುರುವಾಗಿದೆ. ಏಕೆಂದರೆ, ಈಗ ಎಲೆಕ್ಷನ್ ಟೈಮು.
ಎಲ್ಲ ಪಕ್ಷಗಳೂ ಈಗ ಮತದಾರರ ಬಳಿ ಓಡೋಡಿ ಹೋಗುತ್ತಿವೆ. ಕಾರ್ಯಕ್ರಮ ನಡೆಸುತ್ತಿವೆ. ಹೀಗಿರುವಾಗ ಎಲ್ಲ ಪಕ್ಷಗಳವರಿಗೂ ತಮ್ಮ ತಮ್ಮ ಕಾರ್ಯಕ್ರಮಗಳಿಗೆ ಜನರನ್ನು ಸೇರಿಸುವುದು ಅನಿವಾರ್ಯ. ಹೀಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿಯವರು ಗಡ್ಡಪ್ಪನ ಬೆನ್ನು ಬಿದ್ದಿದ್ದಾರಂತೆ. ಹಣ ಕೊಡ್ತೇವೆ, ನಮ್ಮ ಪ್ರಚಾರ ಕಾರ್ಯಕ್ರಮಕ್ಕೆ ಬನ್ನಿ ಎಂದು ಗೋಗರೆಯುತ್ತಿದ್ದಾರಂತೆ.
`ಕಾಂಗ್ರೆಸ್‍ನೋರು, ಬಿಜೆಪಿಯೋರು ಇಬ್ಬರೂ ಕರಿತಾರೆ. ಒಬ್ಬರ ಪಕ್ಷಕ್ಕೆ ಹೋದರೆ, ಇನ್ನೊಬ್ಬರ ಪಕ್ಷಕ್ಕೆ ಬೇಜಾರು. ಹಾಗಾಗಿ ಯಾವ ಕಾರ್ಯಕ್ರಮಕ್ಕೂ ಹೋಗುತ್ತಿಲ್ಲ. ಆರೋಗ್ಯ ಸರಿ ಇಲ್ಲ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದೇನೆ'' ಅಂತಾರೆ ಗಡ್ಡಪ್ಪ ಅಲ್ಲಲ್ಲ.. ಚೆನ್ನೇಗೌಡ.